Yuvavahini

JUL 19, 2026 2.00 PM IST

ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ರಾಜ್ಯ ಮಟ್ಟದ ಕಥೆ–ಕವನ ಸ್ಪರ್ಧೆ

ಡಾ. ಸುರೇಶ್ ನೆಗಳಗುಳಿ ಹಾಗೂ ರಮ್ಯ ರಘುಪತಿ ಪ್ರಥಮ ಬಹುಮಾನ ವಿಜೇತರು

ಕೊಲ್ಯ, ಜುಲೈ 19: ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ಲೇಖಕರಾದ ವಿದ್ವಾನ್ ದಿ. ರಮನಾಥ್ ಕೋಟೆಕಾರ್ ಅವರ ಜನ್ಮದಿನದ ಅಂಗವಾಗಿ ರಾಜ್ಯ ಮಟ್ಟದ ಆನ್‌ಲೈನ್ ಕಥೆ ಮತ್ತು ಕವನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು, ಕಥಾ ವಿಭಾಗದಲ್ಲಿ 133 ಹಾಗೂ ಕವನ ವಿಭಾಗದಲ್ಲಿ 231 ಕೃತಿಗಳು ಸಲ್ಲಿಕೆಯಾಗಿದ್ದವು.

ವಿದ್ವಾನ್ ದಿ.ರಮಾನಾಥ್ ಕೋಟೆಕಾರ್

ಕಥಾ ವಿಭಾಗದಲ್ಲಿ ಡಾ. ಸುರೇಶ್ ನೆಗಳಗುಳಿ (ಮಂಗಳೂರು) ಅವರ “ಅನಾವರಣ” ಕಥೆ ಪ್ರಥಮ ಬಹುಮಾನ (₹10,000) ಪಡೆದುಕೊಂಡಿತು. ಶಾರದಾ ಎ. ಅಂಚನ್ (ಕೊಡವೂರು) ಅವರ “ಸ್ವಗತ” ಕಥೆ ದ್ವಿತೀಯ ಬಹುಮಾನ (₹7,500) ಗಳಿಸಿತು. ಚೇತನ್ ವರ್ಕಾಡಿ (ಮಂಜೇಶ್ವರ) ಅವರ “ಪತಿವ್ರತೆ” ಹಾಗೂ ರೂಪಾಶ್ರೀ ರವೀಶ್ (ಭಂಡಾರಿಬೆಟ್ಟು, ಬಂಟ್ವಾಳ) ಅವರ “ವಿಧವೆಯಾಗದ ವಿಧವೆ” ಕಥೆಗಳು ತೃತೀಯ ಬಹುಮಾನಕ್ಕೆ (ತಲಾ ₹2,500) ಆಯ್ಕೆಯಾದವು. ಮೆಚ್ಚುಗೆಯ ಬಹುಮಾನಕ್ಕೆ ಸುಧಾ ಎನ್. ತೇಲ್ಕರ್ (ಚೆನ್ನೈ), ಚಿತ್ರಾಶ್ರೀ ಮನೋಜ್ (ಮಂಗಳೂರು), ಎ. ಹರೀಶ ಡೋಂಗ್ರೆ (ಮಾಳ), ಪರಿಮಳ ಮಹೇಶ್ ರಾವ್ (ಮಂಗಳೂರು) ಹಾಗೂ ಗಂಗಾದೇವಿ ಚಕ್ರಸಾಲಿ (ಬೆಳಗಾವಿ) ಅವರ ಕಥೆಗಳು (ತಲಾ ₹1,000) ಪಾತ್ರವಾದವು.

ಡಾ.ಸುರೇಶ್ ನೆಗಳಗುಳಿ ಮಂಗಳೂರು

ಕವನ ವಿಭಾಗದಲ್ಲಿ ರಮ್ಯ ರಘುಪತಿ (ಕೊಕ್ಕಡ, ಬೆಳ್ತಂಗಡಿ) ಅವರ “ಊರ್ಮಿಳೆಯ ವ್ಯಥೆ” ಕವನ ಪ್ರಥಮ ಬಹುಮಾನ (₹7,500) ಪಡೆದುಕೊಂಡಿತು. ಹಿತೇಶ್ ಕುಮಾರ್ ಎ. (ಕಾಸರಗೋಡು) ಅವರ “ಏಕತೆಯ ಜ್ಯೋತಿ” ಕವನ ದ್ವಿತೀಯ ಬಹುಮಾನ (₹5,000) ಹಾಗೂ ಚೈತ್ರ ಕಬ್ಬಿನಾಲೆ (ಕಾರ್ಕಳ) ಅವರ “ಅಂಗರಾಜ ಕರ್ಣ” ಕವನ ತೃತೀಯ ಬಹುಮಾನ (₹3,000) ಗಳಿಸಿತು. ಅನುಪಮ ಸುಲಾಖೆ (ಹೊಸಪೇಟೆ), ಶರ್ಮಿಳ ಉಡುಪ (ಮಂಗಳೂರು), ಸತ್ಯಲತಾ ಸಿದ್ಧಮೂಲೆ (ಬೆಳ್ತಂಗಡಿ), ವಿಶ್ವೇಶ್ವರ ಎಂ. ಭಟ್ (ಮಂಗಳೂರು) ಹಾಗೂ ಅಶ್ವಥ್ ಬರಿಮಾರು (ಬಂಟ್ವಾಳ) ಅವರ ಕವನಗಳು ಮೆಚ್ಚುಗೆಯ ಬಹುಮಾನಕ್ಕೆ (ತಲಾ ₹1,000) ಆಯ್ಕೆಯಾದವು.

ರಮ್ಯ ರಘುಪತಿ ಬೆಳ್ತಂಗಡಿ

ಕಥಾ ವಿಭಾಗದ ತೀರ್ಪುಗಾರರಾಗಿ ಹಿರಿಯ ಸಾಹಿತಿ ಬಿ. ಸತ್ಯವತಿ ಭಟ್ ಕೊಳಚಪ್ಪು ಹಾಗೂ ಕವನ ವಿಭಾಗದ ತೀರ್ಪುಗಾರರಾಗಿ ಹಿರಿಯ ಸಾಹಿತಿ ವ. ಉಮೇಶ ಕಾರಂತ ಕಾರ್ಯನಿರ್ವಹಿಸಿದರು.

ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ನಿತಿನ್ ಕರ್ಕೇರ ಇವರಿಂದ ಕಥಾ ಸ್ಪರ್ಧೆಯ ಪ್ರಥಮ ಬಹುಮಾನ ಸ್ವೀಕರಿಸುತ್ತಿರುವ ಡಾ.ಸುರೇಶ್ ನೆಗಳಗುಳಿ

ವೈವಿಧ್ಯಮಯ ಫಲಿತಾಂಶ ಘೋಷಣೆ

ಸ್ಪರ್ಧೆಯ ಫಲಿತಾಂಶವನ್ನು ವಾಟ್ಸಾಪ್ ಬಳಗದ ಮೂಲಕ ವಿಶೇಷ ಹಾಗೂ ವಿನೂತನ ರೀತಿಯಲ್ಲಿ ಪ್ರಕಟಿಸಲಾಯಿತು. ಕಾರ್ಯಕ್ರಮವು ಯುವವಾಹಿನಿ (ರಿ.) ಕೊಲ್ಯ ಘಟಕದ ಕಾರ್ಯದರ್ಶಿ ಸೌಮ್ಯ ಯೋಗೀಶ್ ಕೋಟೆಕಾರ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ವಿದ್ವಾನ್ ದಿ. ರಮನಾಥ್ ಕೋಟೆಕಾರ್ ಅವರ ಬದುಕು ಹಾಗೂ ಸಾಹಿತ್ಯ ಸೇವೆಯ ಕುರಿತ ವಿಶೇಷ ಚಿತ್ರಣವನ್ನು ಬಿತ್ತರಿಸಲಾಯಿತು.

ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ನಿತಿನ್ ಕರ್ಕೇರ ಇವರಿಂದ ಕವನ ಸ್ಪರ್ಧೆಯ ಪ್ರಥಮ ಬಹುಮಾನ ಸ್ವೀಕರಿಸುತ್ತಿರುವ ರಮ್ಯ ರಘುಪತಿ

ಘಟಕದ ಅಧ್ಯಕ್ಷ ನಿತಿನ್ ಕರ್ಕೆರ ಸ್ವಾಗತಿಸಿದರು. ಸ್ಪರ್ಧೆಯ ಪ್ರಾಯೋಜಕರಾದ ಆಶಾ ರಮನಾಥ್ ಕೋಟೆಕಾರ್ ಪ್ರಸ್ತಾವನೆಗೈದರು. ನಿಯೋಜಿತ ಕಾರ್ಯದರ್ಶಿ ಮುಕೇಶ್ ಕಿನ್ಯ ಯಕ್ಷಗಾನದ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಹಿರಿಯ ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಡಾ. ಮೀನಾಕ್ಷಿ ರಾಮಚಂದ್ರ, ಬೆನೆಟ್ ಅಮಣ್ಣ, ನರೇಶ್ ಕುಮಾರ್ ಸಸಿಹಿತ್ಲು ಅವರು ವಿದ್ವಾನ್ ರಮನಾಥ್ ಕೋಟೆಕಾರ್ ಅವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯನ್ನು ಸ್ಮರಿಸಿದರು. ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹಾಗೂ ವೇದಾವತಿ ಟೀಚರ್ ಶುಭ ಹಾರೈಸಿದರು.

ತೀರ್ಪುಗಾರರ ಅನಿಸಿಕೆಗಳನ್ನು ಪ್ರಸಾರ ಮಾಡಿದ ಬಳಿಕ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಕೊನೆಯಲ್ಲಿ ಸ್ಪರ್ಧೆಯ ಸಂಚಾಲಕರಾದ ಲತೀಶ್ ಎಂ. ಸಂಕೋಳಿಗೆ ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಅಗಸ್ಟ್ 23
ಸ್ಥಳ : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!