ಮಾಣಿ, ಜೂನ್: ಯುವವಾಹಿನಿ (ರಿ.) ಮಾಣಿ ಘಟಕದ ‘ಯುವ ಸೇವಾ ಸ್ಪರ್ಶ’ ಯೋಜನೆಯಡಿ ಗೋಳಿಕಟ್ಟೆಯ ನಿವಾಸಿಗಳಾದ ಆನಂದ ಹಾಗೂ ಲೀಲಾ ದಂಪತಿಗಳಿಗೆ ಒಂದು ತಿಂಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿರುವ ಲೀಲಾ ಅವರು ನಡೆಯಲೂ ಕಷ್ಟಪಡುತ್ತಿರುವುದಲ್ಲದೆ ಆನಂದ ಅವರ ಆರೋಗ್ಯವೂ ಉತ್ತಮವಾಗಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಈ ದಂಪತಿಗಳಿಗೆ ಮಾನವೀಯ ಕಾಳಜಿಯಿಂದ ಯುವವಾಹಿನಿ ವತಿಯಿಂದ ಆಹಾರ ಸಾಮಗ್ರಿಗಳನ್ನು ವಿತರಿಸಿ ನೆರವು ನೀಡಲಾಯಿತು. ಘಟಕದ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಮಾಜಸೇವಾ ನಿರ್ದೇಶಕ ಸುರೇಶ್ ಅವರ ನೇತೃತ್ವದಲ್ಲಿ ಆಹಾರ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಹರೀಶ್ ಬಾಕಿಲ, ಕೋಶಾಧಿಕಾರಿ ತ್ರಿವೇಣಿ ರಮೇಶ್, ಆರೋಗ್ಯ ನಿರ್ದೇಶಕಿ ರತಿ ಕಡೆ ಶಿವಾಲಯ, ಸಂಘಟನಾ ಕಾರ್ಯದರ್ಶಿ ಮೋಹನ್ ಮುಜಲ್, ಸುರೇಶ್ ಪೂಜಾರಿ, ಸೀತಾಲಕ್ಷ್ಮಿ, ಅಮಿತಾ ಪೆರ್ನೆ ಹಾಗೂ ಸದಸ್ಯರಾದ ಗೀತಾ ಚಂದ್ರಶೇಖರ ಗೋಳಿಕಟ್ಟೆ ಮತ್ತು ಸುಜಾತ ಸುರೇಶ್ ಉಪಸ್ಥಿತರಿದ್ದರು. ಯುವವಾಹಿನಿಯ ‘ಯುವ ಸೇವಾ ಸ್ಪರ್ಶ’ ಯೋಜನೆಯ ಮೂಲಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನಿರಂತರ ನೆರವು ನೀಡಲಾಗುತ್ತಿದ್ದು, ಸಮಾಜಸೇವೆಯ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಘಟಕವು ಯಶಸ್ವಿಯಾಗಿ ಮುಂದುವರಿಸುತ್ತಿದೆ.


