ಮಾಣಿ, ಜುಲೈ 8: ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಯುವವಾಹಿನಿ (ರಿ.) ಮಾಣಿ ಘಟಕವು ತನ್ನ ‘ಯುವ ಆರೋಗ್ಯ ಸ್ಪರ್ಶ’ ಯೋಜನೆಯಡಿ ಘಟಕದ ಸಕ್ರಿಯ ಸದಸ್ಯ ಯಶೋಧರ ಕೊಡಾಜೆ (ಮಾಣಿ ಗ್ರಾಮದ ದೈವಪಾತ್ರಿ) ಅವರ ಚಿಕಿತ್ಸೆಗೆ ₹50,000 ಧನಸಹಾಯವನ್ನು ವಿತರಿಸಿತು.

ಯಶೋಧರ ಕೊಡಾಜೆ ಅವರು ಎಲುಬುಗಳಿಗೆ ಸಂಬಂಧಿಸಿದ ಅಪರೂಪದ ಆಲ್ಕಾಪ್ಟೋನೂರಿಯಾ (Alkaptonuria) ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಹಲವು ವರ್ಷಗಳಿಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಹೆಚ್ಚಿನ ವೆಚ್ಚವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಈ ಧನಸಹಾಯವನ್ನು ನೀಡಲಾಯಿತು.
ಧನಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಮಾಣಿ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ, ಮಾಜಿ ಕೇಂದ್ರ ಅಧ್ಯಕ್ಷ ರಾಜೇಶ್ ಸುವರ್ಣ ಬಂಟ್ವಾಳ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ಈಶ್ವರ ಪೂಜಾರಿ, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಸಂಜೀವ ಪೂಜಾರಿ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಆರೋಗ್ಯ ನಿರ್ದೇಶಕಿ ರತಿ ಕಡೆಶಿವಾಲಯ, ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಹರೀಶ್ ಬಾಕಿಲ, ಮಾಜಿ ಅಧ್ಯಕ್ಷರಾದ ಜಯಂತ ಬರಿಮಾರು, ರವಿಚಂದ್ರ ಬಾಬನಕಟ್ಟೆ, ಪ್ರಶಾಂತ್ ಅನಂತಾಡಿ, ರಮೇಶ್ ಪೂಜಾರಿ ಮುಜಲ್, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


