ಕಲ್ಲಡ್ಕ, ಜುಲೈ 9: “ಪ್ರಕೃತಿಯ ನಾಶ ಜಗತ್ತಿನ ಸರ್ವನಾಶ” ಎಂಬುದು ಬ್ರಹ್ಮಶ್ರೀ ನಾರಾಯಣ ಗುರುಗಳ ಪರಿಸರ ಸಂರಕ್ಷಣೆಯ ಸಂದೇಶದ ಸಾರವಾಗಿದ್ದು, ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹೇಳಿದರು.
ಅವರು ಜುಲೈ 9ರಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ‘ಗುರುತತ್ವವಾಹಿನಿ’ 70ನೇ ಮಾಲಿಕೆ ಕಾರ್ಯಕ್ರಮದಲ್ಲಿ, ವೀರಕಂಭ ಗ್ರಾಮದ ಗೋಳಿಮಾರು ಜನಾರ್ದನ ಪೂಜಾರಿಯವರ ನೂತನ ಗೃಹ “ಬ್ರಹ್ಮಶ್ರೀ” ನಿವಾಸದಲ್ಲಿ ಗುರುಸಂದೇಶ ನೀಡುತ್ತಾ ಮಾತನಾಡಿದರು.

ದೇವರನ್ನು ಹೇಗೆ ನಿತ್ಯ ಭಕ್ತಿಯಿಂದ ಆರಾಧಿಸುತ್ತೇವೆಯೋ, ಅದೇ ರೀತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಪ್ರತಿದಿನ ಸ್ಮರಿಸಬೇಕು. ಗುರುಗಳು ಸಮಾಜದಲ್ಲಿ ತಂದ ಸಾಮಾಜಿಕ ಕ್ರಾಂತಿಯಿಂದಲೇ ಇಂದು ನಾವು ತಲೆ ಎತ್ತಿ ಬದುಕುವಂತಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘ ವೀರಕಂಭ ಗ್ರಾಮ ಬಿಲ್ಲವ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು, ಶೇಖರ್ ನರಿಕೊಂಬು, ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದ ಮನೆ ಮಾಲೀಕರಾದ ಜನಾರ್ದನ ಪೂಜಾರಿ ಹಾಗೂ ಕುಟುಂಬಸ್ಥರು, ಚೇತನ, ಅರ್ಜುನ್, ಹರ್ಷ, ಯುವವಾಹಿನಿ (ರಿ.) ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ದ್ವಿತೀಯ ಉಪಾಧ್ಯಕ್ಷ ಹರೀಶ್ ಅಜೆಕಲಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಚಿನ್ನಾ ಕಲ್ಲಡ್ಕ, ಶೈಲೇಶ್ ಕುಚಿಗುಡ್ಡೆ, ನವೀನ್ ಪೂಜಾರಿ ಕಾರಾಜೆ, ಸಂಘಟನಾ ಕಾರ್ಯದರ್ಶಿ ಸುನಿತಾ ನಿತಿನ್ ಮಾರ್ನಬೈಲ್, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ಅರುಣ್ ಮಹಾಕಾಳಿಬೆಟ್ಟು, ನಾಗೇಶ್ ಪೊನ್ನೋಡಿ, ಸದಸ್ಯರಾದ ಯಶೋಧರ್ ಕಡಂಬಲಿಕೆ, ರಂಜಿತ್ ನರಿಕೊಂಬು, ಉದಯ್ ಮೇನಾಡು, ಸುದೀಪ್ ಸಾಲ್ಯಾನ್ ರಾಯಿ, ವಿಘ್ನೇಶ್ ಬೊಳ್ಳಾಯಿ, ಸತೀಶ್ ಬಾಯಿಲ, ಯತೀಶ್ ಬೊಳ್ಳಾಯಿ, ಸಾತ್ವಿಕ್ ದೇರಾಜೆ, ಕಾರ್ತಿಕ್ ದೇರಾಜೆ, ಜನಾರ್ದನ ಪೂಜಾರಿಯವರ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು. ಯುವವಾಹಿನಿಯ ನಾರಾಯಣ ಗುರುತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು


