ವೇಣೂರು ಜೂನ್ 26: ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ “ಬೆಳಕು” ಯೋಜನೆಯಡಿ ಸಮಾಜಮುಖಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡು, ಬೆಳ್ತಂಗಡಿ ತಾಲೂಕಿನ ಪೇರಿ–ಹೊಸಂಗಡಿ ಗ್ರಾಮದ ಶ್ರೀಮತಿ ಬೇಬಿ ಅವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.

ಈ ಕಾರ್ಯಕ್ರಮವು ದಿನಾಂಕ 26-06-2026ರಂದು ಪೇರಿ–ಹೊಸಂಗಡಿ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್ ನಾರಾವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸದಸ್ಯತ್ವ ಅಭಿಯಾನ ಹಾಗೂ “ಆಸರೆ” ಯೋಜನೆ ಕುರಿತು ಚರ್ಚಿಸಿ, ಬಡ ಕುಟುಂಬದ ವಿದ್ಯಾರ್ಥಿಗೆ ಸಹಾಯಧನ ನೀಡಲು ನಿರ್ಧರಿಸಲಾಯಿತು.
ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್ ನಾರಾವಿ ಅವರು ಘಟಕದ ಮುಂಬರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಘಟಕದ ಸ್ಥಾಪಕ ಅಧ್ಯಕ್ಷರಾದ ನಿತೀಶ್ ಹೆಚ್ ಅವರು ಸದಸ್ಯತ್ವದ ಮಹತ್ವವನ್ನು ವಿವರಿಸಿ, ಪ್ರಸಕ್ತ, ಮಾಜಿ ಹಾಗೂ ಹೊಸ ಸದಸ್ಯರು ಕಡ್ಡಾಯವಾಗಿ ಸದಸ್ಯತ್ವ ಪಡೆದು ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಘಟಕದ ಕೋಶಾಧಿಕಾರಿ ಸತೀಶ್ ಚಿಗುರು ಅವರ ಪ್ರಾಯೋಜಕತ್ವದಲ್ಲಿ ಉಚಿತ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ನಿತೀಶ್ ಹೆಚ್, ನವೀನ್ ಪಚ್ಚೇರಿ, ಅರುಣ್ ಕೋಟ್ಯಾನ್, ಶುಭಕರ ಪೂಜಾರಿ ಸಾವ್ಯ, ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಘಟಕದ ಸಲಹೆಗಾರ ರಾಕೇಶ್ ಮೂಡುಕೋಡಿ, ನಿರ್ದೇಶಕರಾದ ಸುಜಿತ್ ಕುಮಾರ್, ಪ್ರವೀಣ್ ಕೋಟ್ಯಾನ್ ನಾರಾವಿ, ಮಹಿಳಾ ನಿರ್ದೇಶಕರಾದ ಗುಣವತಿ ಡಿ. ಹಾಗೂ ಜಯಂತಿ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜಮುಖಿ ಸೇವೆಯನ್ನು ಗುರುತಿಸಿ, ಪೇರಿ–ಹೊಸಂಗಡಿ ಶ್ರೀ ಶಾರದಾಂಭ ಭಜನಾ ಮಂದಿರದ ವತಿಯಿಂದ ಘಟಕದ ಕೋಶಾಧಿಕಾರಿ ಸತೀಶ್ ಚಿಗುರು ಅವರನ್ನು ಸನ್ಮಾನಿಸಲಾಯಿತು. ಭಜನಾ ಮಂದಿರದ ಅಧ್ಯಕ್ಷ ಆನಂದ್ ಬಂಗೇರ, ಕಾರ್ಯದರ್ಶಿ ಸುಜಿತ್ ಕುಮಾರ್ ಹಾಗೂ ಸದಸ್ಯರಾದ ರಶ್ಮಿ ಹರಿಪ್ರಸಾದ್, ಸಂಗಮ್ ಪೇರಿ, ಸೂರಜ್ ಪೇರಿ, ಅಂಕಿತ್ ಬಂಗೇರ ಕೊಡಿಂಗೇರಿ, ಬಾಬು ಕೋಟ್ಯಾನ್, ಸನತ್, ಸಂದೀಪ್ ಮತ್ತು ಸಂದೇಶ್ ಉಪಸ್ಥಿತರಿದ್ದರು.
ಘಟಕದ ವ್ಯಕ್ತಿತ್ವ ವಿಕಾಸನ ನಿರ್ದೇಶಕ ಸುಜಿತ್ ಕುಮಾರ್ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಶ್ರೀಮತಿ ದಕ್ಷಾ ಅಂಬಲ ವಂದನಾರ್ಪಣೆಗೈದರು. ಕಾರ್ಯಕ್ರಮದ ಬಳಿಕ ಪೇರಿ–ಹೊಸಂಗಡಿ ಶ್ರೀ ಶಾರದಾಂಭ ಭಜನಾ ಮಂದಿರದ ವತಿಯಿಂದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು


