ಕಂಕನಾಡಿ ಮೇ 14 : ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಮೇ 14, 2026ರಂದು ನಡೆದ ಸಭೆಯಲ್ಲಿ ಘಟಕದ ಸದಸ್ಯರಾದ ಮೋಹನ್ ಅಮೀನ್ ಅವರು ಕ್ಯೂಆರ್ ಕೋಡ್ ಆಧಾರಿತ ಶಿಕ್ಷಣ ಸಂಪನ್ಮೂಲಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅವರು ಭಗವದ್ಗೀತೆಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ದೃಶ್ಯ-ಶ್ರವ್ಯ ಮಾಧ್ಯಮದ ಸಹಾಯದಿಂದ ಸುಲಭವಾಗಿ ಅಧ್ಯಯನ ಮಾಡಬಹುದಾದ ಪುಸ್ತಕವನ್ನು ಪರಿಚಯಿಸಿದರು. ಅಲ್ಲದೆ, ಎಜುಟೆಕ್ ಸಂಸ್ಥೆ ಪ್ರಕಟಿಸಿರುವ 8ನೇ ಹಾಗೂ 9ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳ ಕ್ಯೂಆರ್ ಕೋಡ್ ಹೊಂದಿರುವ ಪುಸ್ತಕಗಳ ಕುರಿತು ವಿವರಿಸಿ, ವಿದ್ಯಾರ್ಥಿಗಳು ದೃಶ್ಯಮಾಧ್ಯಮದ ಮೂಲಕ ಪಾಠಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸದಸ್ಯರು ಆಸಕ್ತಿಯಿಂದ ಮಾಹಿತಿ ಆಲಿಸಿ, ಇಂತಹ ತಂತ್ರಜ್ಞಾನ ಆಧಾರಿತ ಕಲಿಕಾ ಸಂಪನ್ಮೂಲಗಳು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


