ಮಾಣಿ, ಜೂನ್ 22: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ “ಯುವ ವೃಕ್ಷೋತ್ಸವ–2026” ಅಂಗವಾಗಿ ಮಾಣಿ ವ್ಯಾಪ್ತಿಯ ವಿವಿಧ ಶಾಲೆಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವೃಕ್ಷಾರೋಪಣ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.

ಈ ಅಭಿಯಾನದ ಭಾಗವಾಗಿ ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜು ಪೆರ್ನೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇರ, ಸರಕಾರಿ ಪ್ರೌಢಶಾಲೆ ಸೂರ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು, ಮಾಣಿ ಶ್ರೀ ಉಳ್ಳಾಲ್ತಿ ಧರ್ಮಚಾವಡಿ ಹಾಗೂ ಇಡ್ಕಿದು ಗ್ರಾಮ ಪಂಚಾಯಿತಿ ಅಂಗನವಾಡಿ ಕೇಂದ್ರ ಶೇರಾ , ಪಾಟ್ರ ಕೋಡಿ, ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಕೆದಿಲ
ಸರಕಾರಿ ಶಾಲೆ ಏಮಾಜೆಯ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಸಿಬ್ಬಂದಿ, ಸಾರ್ವಜನಿಕರು ಹಾಗೂ ಯುವವಾಹಿನಿ ಸದಸ್ಯರೊಂದಿಗೆ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.

ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ ಕೊಡಾಜೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪೋಷಣೆಯ ಹೊಣೆ ಹೊತ್ತರೆ ಹಸಿರು ಭವಿಷ್ಯ ನಿರ್ಮಾಣ ಸಾಧ್ಯ ಎಂದು ಅವರು ಕರೆ ನೀಡಿದರು.

ಪೆರ್ನೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶೈಲಾ ಎನ್., ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ರೈ ಕೆ.ಎಂ., ಇಕೋ ಕ್ಲಬ್ ಸಂಚಾಲಕರಾದ ಆಶಾಲತಾ, ಇಂಟರ್ಯಾಕ್ಟ್ ಕ್ಲಬ್ ಸಂಚಾಲಕರಾದ ಇಂದಿರಾ, ದೈಹಿಕ ಶಿಕ್ಷಣ ನಿರ್ದೇಶಕರಾದ ನಿತಿನ್ ಕೊಡಿಯಾ, ವಿನೋದ್ ಬಾಕಿಮಾರು, ಲೋಕೇಶ್ ಮಂಜುಶ್ರೀ, ಉಮೇಶ್, ಚೇತನ್ ಮಲ್ಲಡ್ಕ ಉಪಸ್ಥಿತರಿದ್ದರು.
ಇಡ್ಕಿದು ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿಸೋಜ ಚಾಲನೆ ನೀಡಿದರು. ಮಾಣಿ ಉಳ್ಳಾಲ್ತಿ ಅಮ್ಮನ ಪವಿತ್ರ ಸನ್ನಿಧಿಯಲ್ಲಿ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು ಅವರ ನೇತೃತ್ವದಲ್ಲಿ ವೃಕ್ಷಾರೋಪಣ ನಡೆಯಿತು.
ಈ ವಿವಿಧ ಕಾರ್ಯಕ್ರಮಗಳಲ್ಲಿ ಯುವವಾಹಿನಿ ಘಟಕದ ಉಪಾಧ್ಯಕ್ಷರಾದ ಸುಜಿತ್ ಅಂಚನ್, ಕೋಶಾಧಿಕಾರಿ ತ್ರಿವೇಣಿ ರಮೇಶ್, ಜೊತೆ ಕಾರ್ಯದರ್ಶಿ ಶಶಿಪ್ರಭಾ, ಸಂಘಟನಾ ಕಾರ್ಯದರ್ಶಿಗಳಾದ ರೇಖಾ ಸುರೇಶ್, ಮೋಹನ ಮುಜಲ, ಶುಭ ಪೆರ್ನೆ, ಸದಸ್ಯರಾದ ರೇಣುಕಾ ಕಣಿಯೂರು, ಸವಿತಾ ಮಿತ್ತೂರು, ಅಮಿತಾ ಪೆರ್ನೆ, ವಿಕ್ರಂ ಬಿಳಿಯೂರು, ಶಕೀಲಾ ಕೃಷ್ಣ ಮಿತ್ತಕೋಡಿ ಸೇರಿದಂತೆ ಹಲವು ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.
ಹಸಿರು ಪರಿಸರದ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಯುವ ವೃಕ್ಷೋತ್ಸವ–2026 ಕಾರ್ಯಕ್ರಮವು ಮಾಣಿ ಘಟಕದ ಸಮಾಜಮುಖಿ ಚಟುವಟಿಕೆಗಳಿಗೆ ಮತ್ತೊಂದು ಅರ್ಥಪೂರ್ಣ ಹೆಜ್ಜೆಯಾಯಿತು.


