Yuvavahini

JUN 22, 2026 5.00 PM IST

ಯುವಸಿಂಚನ : ಜೂನ್ 2026

ಅಧ್ಯಕ್ಷರ ಮಾತು : ಅಶೋಕ್ ಕುಮಾರ್ ಪಡ್ಪು

ಯುವವಾಹಿನಿ ಕುಟುಂಬದ ಅತ್ಮೀಯ ಸದಸ್ಯರೆ,

‘ಯುವಸಿಂಚನ’ದ ಚೊಚ್ಚಲ ಸಂಚಿಕೆಗೆ ನೀವು ತೋರಿದ ಅತೀವ ಪ್ರೀತಿ, ಪ್ರೋತ್ಸಾಹ ಮತ್ತು ಮೆಚ್ಚುಗೆಯ ಮಾತುಗಳು ನಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಿವೆ. ಅದೇ ಲವಲವಿಕೆ ಮತ್ತು ಆತ್ಮವಿಶ್ವಾಸದೊಂದಿಗೆ, ಮಲೆನಾಡ ಮಳೆಯ ಸಿಂಚನದಂತೆ ಹಿತ ನೀಡುವ ಈ ದ್ವಿತೀಯ ಸಂಚಿಕೆಯನ್ನು ನಿಮ್ಮ ಕೈಗಿಡಲು ಹೆಮ್ಮೆ ಎನಿಸುತ್ತಿದೆ.

ಯುವವಾಹಿನಿಯ ಪಯಣವು ಕೇವಲ ಕಾರ್ಯಕ್ರಮಗಳ ಸರಮಾಲೆಯಲ್ಲ; ಅದು ವ್ಯಕ್ತಿತ್ವವನ್ನು ಪಳಗಿಸುವ, ಸಮಾಜವನ್ನು ಭಾವನಾತ್ಮಕವಾಗಿ ಬೆಸೆಯುವ ಮತ್ತು ಹೊಸ ಭರವಸೆಯ ಹಾದಿಗಳನ್ನು ಸೃಷ್ಟಿಸುವ ಒಂದು ನಿರಂತರ ಜ್ಞಾನಯಜ್ಞ.

ಅಶೋಕ್ ಕುಮಾರ್ ಪಡ್ಪು
ಗೌರವ ಸಂಪಾದಕರು

ಬಂಟ್ವಾಳ ಘಟಕದ ಅದ್ಭುತ ಆತಿಥ್ಯದಲ್ಲಿ ಜರುಗಿದ “ಡೆನ್ನಾನ ಡೆನ್ನನ – 2026” ಸಾಂಸ್ಕೃತಿಕ ಹಬ್ಬವು ಯುವವಾಹಿನಿಯ ಇತಿಹಾಸದಲ್ಲೇ ಒಂದು ಅವಿಸ್ಮರಣೀಯ ಮೈಲಿಗಲ್ಲಾಗಿ ಮೂಡಿಬಂದಿದೆ.
​ಬಿಲ್ಲವ ಸಮಾಜದ ಗತಕಾಲದ ವೈಭವ, ವರ್ತಮಾನದ ಸ್ಥಿತಿಗತಿ ಹಾಗೂ ಭವಿಷ್ಯದ ದಿಕ್ಸೂಚಿಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ ಈ ವೇದಿಕೆಯು ಹೊಸದೊಂದು ಕ್ರಾಂತಿಗೆ ಸಾಕ್ಷಿಯಾಯಿತು. ಬಿಲ್ಲವ ಸಮಾಜದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು, ವೀರ ಪುರುಷರು, ಧೀಮಂತ ವನಿತೆಯರು ಹಾಗೂ ಸಮಾಜದ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ವೃತ್ತಿ ಬದುಕನ್ನು ಅನಾವರಣಗೊಳಿಸಿದ ಈ ಹೊಸತನದ ರಂಗಪ್ರಯೋಗವು ಸಾವಿರಾರು ರಸಿಕ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
​ವಿವಿಧ ಘಟಕಗಳ ಸದಸ್ಯರ ಅವಿರತ ಸಂಘಟಿತ ಪರಿಶ್ರಮ, ಕಲಾವಿದರ ನಿರರ್ಗಳ ಹಾಗೂ ಅದ್ಭುತ ರಂಗಪ್ರದರ್ಶನ ಮತ್ತು ಪ್ರೇಕ್ಷಕ ಮಹಾಪ್ರಭುಗಳ ಅಭೂತಪೂರ್ವ ಸ್ಪಂದನೆಯಿಂದಾಗಿ ಡೆನ್ನಾನ ಡೆನ್ನನ ಯುವವಾಹಿನಿಯ ಸಾಂಸ್ಕೃತಿಕ ಬದ್ಧತೆ ಹಾಗೂ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಿಲ್ಲವ ಸಮಾಜದ ಸಾಂಸ್ಕೃತಿಕ ಬೇರುಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ, ಸಂಘಟನೆಯ ಅಖಂಡ ಏಕತೆ, ಸೃಜನಶೀಲತೆ ಮತ್ತು ದಕ್ಷ ಕಾರ್ಯಕ್ಷಮತೆಯನ್ನು ಇಡೀ ಸಮಾಜದ ಮುಂದೆ ಹೆಮ್ಮೆಯಿಂದ ಅನಾವರಣಗೊಳಿಸಿದ ಕೀರ್ತಿ ಈ ಬಾರಿಯ “ಡೆನ್ನಾನ ಡೆನ್ನನ” ಮಹೋತ್ಸವಕ್ಕೆ ಸಲ್ಲುತ್ತದೆ. ಡೆನ್ನಾನ ಡೆನ್ನಾನ ಸಾಂಸ್ಕೃತಿಕ ಹಬ್ಬವು ಅರ್ಥ ಪೂರ್ಣವಾಗಿ ಮೂಡಿಬರಲು ಸಹಕರಿಸಿದ ಬಂಟ್ವಾಳ ಘಟಕದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಯುವವಾಹಿನಿ ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು.

ಯುವವಾಹಿನಿ ಕೇಂದ್ರ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ “ಶಿವಗಿರಿ ಅಧ್ಯಯನ ಯಾತ್ರೆ”ಯು ಯಶಸ್ವಿಯಾಗಿ ಸಂಪನ್ನಗೊಂಡಿದೆ
​ಯುಗದ ಪ್ರವರ್ತಕ, ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಉದಾತ್ತ ತತ್ವಾದರ್ಶಗಳು, ಮೌಲ್ಯಯುತ ಆಧ್ಯಾತ್ಮಿಕ ಸಂದೇಶಗಳು ಹಾಗೂ ಸಾಮಾಜಿಕ ಸಮಾನತೆಯ ಕ್ರಾಂತಿಕಾರಿ ಚಿಂತನೆಗಳನ್ನು ಸದಸ್ಯರ ಮನದಾಳದಲ್ಲಿ ಮತ್ತಷ್ಟು ಗಟ್ಟಿಯಾಗಿ ಬಿತ್ತಲು ಈ ಅಧ್ಯಯನ ಯಾತ್ರೆಯು ಪ್ರಮುಖ ಮಾಧ್ಯಮವಾಗಿ ಮೂಡಿಬಂದಿದೆ. ಪವಿತ್ರ ಕ್ಷೇತ್ರಗಳಾದ ಶಿವಗಿರಿ ಮಠ, ಗುರುಗಳ ತಪೋಭೂಮಿ ಮರತ್ವಮಲೆ ಸೇರಿದಂತೆ ನಾರಾಯಣ ಗುರುಗಳ ಪಾದಸ್ಪರ್ಶದಿಂದ ಪುನೀತಗೊಂಡ ವಿವಿಧ ದಿವ್ಯ ಕ್ಷೇತ್ರಗಳ ಸಂದರ್ಶನವು, ಭಾಗವಹಿಸಿದ ಯಾತ್ರಾರ್ಥಿಗಳಲ್ಲಿ ಜ್ಞಾನವೃದ್ಧಿ, ಆತ್ಮಾವಲೋಕನ ಹಾಗೂ ಸಂಘಟನೆಯ ನೈತಿಕ ಮೌಲ್ಯಗಳ ಕುರಿತು ಅಪಾರ ಅರಿವನ್ನು ಜಾಗೃತಗೊಳಿಸಿದೆ.
​ಕೇವಲ ಪ್ರವಾಸವಾಗಿರದೆ, ಸದಸ್ಯರ ನಡುವೆ ಸೌಹಾರ್ದತೆ, ಪರಸ್ಪರ ಬಾಂಧವ್ಯ ಹಾಗೂ ನಿಸ್ವಾರ್ಥ ಸೇವಾ ಮನೋಭಾವವನ್ನು ಗಟ್ಟಿಗೊಳಿಸಿದೆ ಯಾತ್ರೆಯ ನೇತೃತ್ವ ವಹಿಸಿ ಯಶಸ್ವಿಯಾಗಿ ಮುನ್ನಡೆಸಿದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಿಗೆ, ಯಾತ್ರೆಯ ಸಂಚಾಲಕರುಗಳಿಗೆ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಸಮಸ್ತ ಸಹೃದಯಿ ಬಂಧುಗಳಿಗೆ ಕೇಂದ್ರ ಸಮಿತಿಯ ಹೃತ್ಪೂರ್ವಕ ಕೃತಜ್ಞತೆಗಳು

ಈ ಪವಿತ್ರ ಪಥದಲ್ಲಿ ಪ್ರತಿಯೊಬ್ಬ ಸದಸ್ಯನ ಶ್ರಮವೂ ಒಂದು ಸುಂದರವಾದ ಶಿಲ್ಪದ ಕೆತ್ತನೆಯಂತೆ ಅನನ್ಯ ಮತ್ತು ಅನಿವಾರ್ಯ.
ಕಳೆದ ಮಾಸದಲ್ಲಿ ವಿವಿಧ ಘಟಕಗಳು ಹಮ್ಮಿಕೊಂಡ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ಯುವವಾಹಿನಿಯ ಅಚಲ ಜೀವಂತಿಕೆಗೆ ಹಿಡಿದ ಕನ್ನಡಿಯಾಗಿವೆ. ಘಟಕಗಳ ನಡುವೆ ಮೇಳೈಸಿರುವ ಸೌಹಾರ್ದತೆ ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವು ನಮ್ಮ ಸಂಘಟನೆಯ ಹೆಮ್ಮರಕ್ಕೆ ಗಟ್ಟಿ ಬೇರುಗಳಿದ್ದಂತೆ.

‘ಯುವಸಿಂಚನ’ ಕೇವಲ ಅಕ್ಷರಗಳ ದಾಖಲೆಯಲ್ಲ; ಅದು ನಮ್ಮ ವೈಚಾರಿಕತೆಯ ಪ್ರತಿಬಿಂಬ. ಹೊಸ ಬರಹಗಾರರಿಗೆ ವೇದಿಕೆಯಾಗಿ, ಯುವಮನಸ್ಸುಗಳ ಅಭಿವ್ಯಕ್ತಿಗೆ ದನಿಯಾಗಿ ಮತ್ತು ಸಮಾಜಮುಖಿ ಚಿಂತನೆಗಳ ಹರಿಕಾರನಾಗಿ ಇದು ಮೂಡಿಬರುತ್ತಿದೆ. ಇಲ್ಲಿನ ಪ್ರತಿಯೊಂದು ಸಾಲು, ಕವನ ಮತ್ತು ವರದಿಗಳು ನಮ್ಮ ಸಂಘಟನೆಯ ಹೃದಯಬಡಿತವನ್ನು ಜಗತ್ತಿಗೆ ಸಾರಲಿವೆ.
ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಡಿಜಿಟಲ್ ಯುಗದ ಅಗತ್ಯಗಳನ್ನು ಅರಿತು ಸಂಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ, ಶಿಸ್ತು ಮತ್ತು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಇದು ನಮ್ಮನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವ ಭದ್ರ ಬುನಾದಿಯಾಗಿದೆ.
ಮುಂದಿನ ದಿನಗಳಲ್ಲಿ ಯುವಜನತೆಗೆ ದಾರಿದೀಪವಾಗುವಂತಹ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ದೃಢ ಸಂಕಲ್ಪ ನಮ್ಮದಾಗಿದೆ. ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಸಮರ್ಪಣಾ ಮನೋಭಾವವೇ ನಮ್ಮೆಲ್ಲಾ ಯಶಸ್ಸಿನ ಮೂಲಮಂತ್ರ.

ನಮ್ಮ ಕನಸಿನ ‘ಸ್ವಂತ ಆಡಳಿತ ಕಚೇರಿ’ಯ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಇದು ಕೇವಲ ಇಟ್ಟಿಗೆ-ಮಣ್ಣಿನ ಕಟ್ಟಡವಲ್ಲ; ಇದು ಯುವವಾಹಿನಿಯ ಬಹುದಿನಗಳ ಕನಸು ಮತ್ತು ನಮ್ಮ ಒಗ್ಗಟ್ಟಿನ ವಿಜಯದ ಸಂಕೇತ. ಈ ಮಹತ್ಕಾರ್ಯಕ್ಕೆ ನಿಮ್ಮೆಲ್ಲರ ಸಹಕಾರ ಹಸ್ತ ಸದಾ ಇರಲಿ.
ಈ ಸಂಚಿಕೆಯನ್ನು ಸುಂದರವಾಗಿ, ಅರ್ಥಪೂರ್ಣವಾಗಿ ರೂಪಿಸಿದ ಸಂಪಾದಕ ಮಂಡಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಅವರ ಅಕ್ಷರ ಪ್ರೇಮ ಮತ್ತು ಸೃಜನಾತ್ಮಕ ಪರಿಶ್ರಮ ಪತ್ರಿಕೆಗೆ ಹೊಸ ಆಯಾಮ ನೀಡಿದೆ.
ನಾವೆಲ್ಲರೂ ಒಂದೇ ಗುರಿಯತ್ತ, ಸೇವಾ ಮನೋಭಾವದ ನಂದಾದೀಪವನ್ನು ಹಿಡಿದು ಮುನ್ನಡೆಯೋಣ. ನಮ್ಮ ಈ ಪಯಣ ಲೋಕದ ಹಿತಕ್ಕೆ ಪೂರಕವಾಗಿರಲಿ ಎಂಬ ಹಾರೈಕೆ ನನ್ನದು.

ವಂದನೆಗಳೊಂದಿಗೆ,

ಅಶೋಕ್ ಕುಮಾರ್ ಪಡ್ಪು
ಗೌರವ ಸಂಪಾದಕರು
ಯುವಸಿಂಚನ ಪತ್ರಿಕೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜುಲೈ 21 ಬೆಳಗ್ಗೆ ಗಂಟೆ 10.30ರಿಂದ
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಗಾಣದಪಡ್ಪು, ಬಿ.ಸಿ.ರೋಡ್

ಯುವವಾಹಿನಿ (ರಿ) ಬಂಟ್ವಾಳ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!