Yuvavahini

JUN 22, 2026 5.00 PM IST

ಯುವಸಿಂಚನ : ಜೂನ್ 2026

ಕಾರ್ಯನಿರ್ವಾಹಕ ಸಂಪಾದಕರ ಮಾತು : ಹರೀಶ್ ವಿ. ಪಚ್ಚನಾಡಿ

ನಮಸ್ಕಾರ……
ಮಳೆಗಾಲದ ಆಗಮನದೊಂದಿಗೆ ಪ್ರಕೃತಿ ಹೇಗೆ ಮೈದುಂಬಿ ಹಸಿರಾಗುತ್ತದೆಯೋ, ಹಾಗೆಯೇ ‘ಯುವಸಿಂಚನ’ ಪತ್ರಿಕೆಯ ಎರಡನೇ ಸಂಚಿಕೆಯೂ ನವಚೈತನ್ಯದೊಂದಿಗೆ ನಿಮ್ಮ ಕೈ ಸೇರುತ್ತಿದೆ. ಮೊದಲ ಸಂಚಿಕೆಯನ್ನು ಪ್ರೀತಿಯಿಂದ ಆಶೀರ್ವದಿಸಿದ ಓದುಗ ಪ್ರಭುಗಳಿಗೆ ಹಾಗೂ ಶ್ರಮಿಸಿದ ಎಲ್ಲಾ ಘಟಕಗಳಿಗೆ ನನ್ನ ಅನಂತ ವಂದನೆಗಳು.

ಹರೀಶ್ ಪಚ್ಚನಾಡಿ, ಕಾರ್ಯನಿರ್ವಾಹಕ ಸಂಪಾದಕರು

ಅಕ್ಷರ ಎಂಬುದು ಕೇವಲ ಕಪ್ಪು ಇಂಕಿನ ಗುರುತಲ್ಲ; ಅದು ಬದಲಾವಣೆಯ ಬೀಜ. ಬಿತ್ತಿದ ಪ್ರತಿ ಅಕ್ಷರವೂ ಯುವ ಮನಸ್ಸುಗಳಲ್ಲಿ ವಿಚಾರದ ಮೊಳಕೆಯೊಡೆಯಬೇಕು ಎಂಬುದು ನಮ್ಮ ಆಶಯ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೈಗಳಿಗೆ ಅಕ್ಷರಗಳೇ ಆಯುಧ. ಈ ನಿಟ್ಟಿನಲ್ಲಿ ಯುವವಾಹಿನಿಯ 35 ಘಟಕಗಳು ಕಳೆದ ತಿಂಗಳು ನಡೆಸಿದ ಸಮಾಜಮುಖಿ ಕಾರ್ಯಗಳು ಈ ಸಂಚಿಕೆಯ ಪುಟಗಳಲ್ಲಿ ದಾಖಲಾಗಿವೆ.

ನೆನಪಿಡಿ…ಒಂದು ಕವನ ಸಾಂತ್ವನ ನೀಡಬಲ್ಲದು, ಒಂದು ಲೇಖನ ದಾರಿ ತೋರಿಸಬಲ್ಲದು, ಮತ್ತು ಒಂದು ವರದಿ ಹತ್ತಾರು ಮಂದಿಗೆ ಸ್ಫೂರ್ತಿಯಾಗಬಲ್ಲದು. ಸಂಪಾದಕೀಯ ಎಂದರೆ ಕೇವಲ ಶಬ್ದಗಳ ಜೋಡಣೆಯಲ್ಲ; ಅದು ನಮ್ಮ ಸಂಘಟನೆಯ ಆಶಯಗಳ ಪ್ರತಿಧ್ವನಿ.
ಬ್ರಹ್ಮಶ್ರೀ ನಾರಾಯಣಗುರುಗಳ “ಸಂಘಟನೆಯಿಂದ ಶಕ್ತಿವಂತರಾಗಿ” ಎಂಬ ಸಂದೇಶವೇ ಈ ಪತ್ರಿಕೆಯ ಜೀವಾಳ. ನಾವು ಹಂಚಿಕೊಳ್ಳುವ ಪ್ರತಿ ಸುದ್ದಿಯೂ ಪಾರದರ್ಶಕವಾಗಿರಲಿ, ನಾವು ಬರೆಯುವ ಪ್ರತಿ ಲೇಖನವೂ ಸಮಾಜದ ಹಿತವನ್ನು ಕಾಯುವಂತಿರಲಿ.
ಈ ಸಂಚಿಕೆಗೆ ತಮ್ಮ ಸೃಜನಶೀಲ ಬರಹಗಳ ಮೂಲಕ ಮೆರುಗು ನೀಡಿದ ಸಾಹಿತಿ ಮಿತ್ರರಿಗೆ, ಸಮಯಕ್ಕೆ ಸರಿಯಾಗಿ ವರದಿಗಳನ್ನು ಕಳುಹಿಸಿದ ಎಲ್ಲಾ ಘಟಕದ ಪದಾಧಿಕಾರಿಗಳಿಗೆ ಮತ್ತು ಪ್ರತಿ ಹಂತದಲ್ಲೂ ಸಾಥ್ ನೀಡಿದ ಸಂಪಾದಕ ಮಂಡಳಿಗೆ ಕೃತಜ್ಞತೆಗಳು ಬರಹಗಳು ನಿಂತ ನೀರಾಗದಿರಲಿ, ಹರಿಯುವ ಹೊಳೆಯಂತೆ ಓದುಗರ ಮನಸ್ಸನ್ನು ಮುಟ್ಟಲಿ. ಮುಂದಿನ ಸಂಚಿಕೆಗಳಲ್ಲಿ ಇನ್ನು ಹೆಚ್ಚಿನ ವೈವಿಧ್ಯಮಯ ವಿಚಾರಗಳೊಂದಿಗೆ ನಿಮ್ಮನ್ನು ಭೇಟಿಯಾಗೋಣ.

ಯುವಸಿಂಚನ ಹರಿಯಲಿ…
ಪದಗಳ ಮೂಲಕ ಬೆಸೆಯಲಿ,
ಸೇವೆಯ ಮೂಲಕ ಬೆಳಗಲಿ.

ವಂದನೆಗಳೊಂದಿಗೆ-

ಹರೀಶ್ ವಿ. ಪಚ್ಚನಾಡಿ
ಕಾರ್ಯನಿರ್ವಾಹಕ ಸಂಪಾದಕರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜುಲೈ 21 ಬೆಳಗ್ಗೆ ಗಂಟೆ 10.30ರಿಂದ
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಗಾಣದಪಡ್ಪು, ಬಿ.ಸಿ.ರೋಡ್

ಯುವವಾಹಿನಿ (ರಿ) ಬಂಟ್ವಾಳ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!