ಮಂಗಳೂರು : ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆಯ ಜೂನ್ ತಿಂಗಳ ಸಂಚಿಕೆಯ ಅಂಚೆ ರವಾನೆ ಪೂರ್ವ ಸಿದ್ಧತಾ ಕಾರ್ಯವು ಇಂದು ಯಶಸ್ವಿಯಾಗಿ ನಡೆಯಿತು.

ಚಂದಾದಾರರು ಹಾಗೂ ಹಿತೈಷಿಗಳಿಗೆ ಯುವಸಿಂಚನ ಪತ್ರಿಕೆಯನ್ನು ತಲುಪಿಸುವ ಉದ್ದೇಶದಿಂದ ಸುಮಾರು 4,000 ಪತ್ರಿಕೆಗಳಿಗೆ ವಿಳಾಸ ಅಂಟಿಸುವ ಕಾರ್ಯವನ್ನು ಕೈಗೊಳ್ಳಲಾಯಿತು. ಈ ಕಾರ್ಯದಲ್ಲಿ ಯುವವಾಹಿನಿ ಮಂಗಳೂರು ಘಟಕ, ಯುವವಾಹಿನಿ ಮಂಗಳೂರು ಮಹಿಳಾ ಘಟಕ ಹಾಗೂ ಯುವಸಿಂಚನ ಸಂಪಾದಕೀಯ ಮಂಡಳಿಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಸಹಕಾರ ನೀಡಿದರು.



