ಬಜಪೆ : ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಜೂನ್ ತಿಂಗಳ ಮನೆ-ಮನೆ ಭಜನಾ ಸಂಕೀರ್ತನೆಯು ದಿನಾಂಕ 08-06-2026 ರಂದು ಸಂಜೆ 6.30 ರಿಂದ 7.30 ಗಂಟೆಯವರೆಗೆ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ಘಟಕದ ಸದಸ್ಯರಾದ ರೂಪಾ ಸತೀಶ್ ಹಾಗೂ ಕುಮಾರಿ ಜೀವಿತ ಅವರ ನಿವಾಸ “ಶ್ರೀ ವೈಭವ ಲಕ್ಷ್ಮೀ”, ಅಂಬಿಕಾ ನಗರ, ಸುಂಕದಕಟ್ಟೆ, ಬಜಪೆ ಇಲ್ಲಿ ಭಜನಾ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನಡೆಯಿತು.
ಈ ಭಜನಾ ಸೇವೆಯಲ್ಲಿ ಘಟಕದ ಪ್ರಥಮ ಉಪಾಧ್ಯಕ್ಷರಾದ ಪೂಜಾ ಕಿರಣ್, ದ್ವಿತೀಯ ಉಪಾಧ್ಯಕ್ಷರಾದ ಶರ್ಮಿಳಾ ಚಂದ್ರಶೇಖರ್, ಭಜನಾ ಸಂಚಾಲಕಿ ದಿವ್ಯಾ ಸುನಿಲ್, ಮಾಜಿ ಅಧ್ಯಕ್ಷರು ಹಾಗೂ ಅನೇಕ ಸದಸ್ಯರು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.
ಭಜನೆಯ ಬಳಿಕ ಪ್ರಸಾದ ಹಾಗೂ ಫಲಾಹಾರದ ವಿತರಣೆ ನಡೆಯಿತು. ಮನೆ-ಮನೆಗಳಲ್ಲಿ ಭಕ್ತಿ ಹಾಗೂ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಪಸರಿಸುವ ಉದ್ದೇಶದಿಂದ ಯುವವಾಹಿನಿಯು ಹಮ್ಮಿಕೊಳ್ಳುತ್ತಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.


