ಬೆಂಗಳೂರು : ಯುವವಾಹಿನಿಯ ಅಧಿಕೃತ ಮುಖವಾಣಿ ‘ಯುವಸಿಂಚನ’ ಪತ್ರಿಕೆಯ ಜೂನ್ ತಿಂಗಳ ಸಂಚಿಕೆಯನ್ನು ಆರ್ಯ ಈಡಿಗ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷೆ ಡಾ. ನಳಿನಾಕ್ಷಿ ಸಣ್ಣಪ್ಪ ಅವರು ಬಿಡುಗಡೆಗೊಳಿಸಿದರು.

ದಿನಾಂಕ 14-06-2026ರಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂನಲ್ಲಿ ನಡೆದ ಯುವವಾಹಿನಿ ಬೆಂಗಳೂರು ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಸಂಚಿಕೆ ಬಿಡುಗಡೆ ನೆರವೇರಿತು. ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ನಳಿನಾಕ್ಷಿ ಸಣ್ಣಪ್ಪ ಅವರು ಯುವವಾಹಿನಿ ಸಂಸ್ಥೆಯ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ಸಂಘಟನೆಯ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯುವಸಿಂಚನ ಪತ್ರಿಕೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು ಹಾಗೂ ಉದ್ಯಮಿ ಜೆ.ಪಿ. ಸುಧಾಕರ್, ವಿಶ್ವಕಪ್ ವಿಜೇತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ, ಹಿರಿಯ ಪತ್ರಕರ್ತೆ ಗೀತಾ ಅಂಚನ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಕಲ್ಲಾಜೆ, ಯುವವಾಹಿನಿ ಬೆಂಗಳೂರು ಘಟಕದ ಅಧ್ಯಕ್ಷ ಶಶಿಧರ್ ಕೋಟ್ಯಾನ್, ನಿಯೋಜಿತ ಅಧ್ಯಕ್ಷ ವಿಜೇತ್ ವಿ. ಪೂಜಾರಿ, ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ, ನಿಯೋಜಿತ ಕಾರ್ಯದರ್ಶಿ ಮನೋಜ್ ಕುಮಾರ್ ಟಿ., ಯುವಸಿಂಚನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಹರೀಶ್ ವಿ. ಪಚ್ಚನಾಡಿ, ಉಪಸಂಪಾದಕ ರಾಜೇಶ್ ಸುವರ್ಣ ಹಾಗೂ ಸಂಪಾದಕ ಮಂಡಳಿ ಸದಸ್ಯ ಶಿವಪ್ರಸಾದ್ ನೂಚಿಲ ಉಪಸ್ಥಿತರಿದ್ದರು.
ಯುವವಾಹಿನಿಯ ಸಂಘಟನಾ ಚಟುವಟಿಕೆಗಳು, ಸಾಮಾಜಿಕ ಸೇವಾ ಕಾರ್ಯಕ್ರಮಗಳು ಹಾಗೂ ವಿವಿಧ ಘಟಕಗಳ ಸಾಧನೆಗಳನ್ನು ದಾಖಲಿಸುವ ಯುವಸಿಂಚನ ಪತ್ರಿಕೆಯ ಜೂನ್ ಸಂಚಿಕೆ ಬಿಡುಗಡೆ ಸಮಾರಂಭವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು.


