ಅಳಕೆ : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಶ್ರೀ ನಾರಾಯಣಗುರುಗಳ ” ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ” ಎಂಬ ಸಂದೇಶವು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಅತ್ಯಂತ ಪ್ರಸ್ತುತವಾಗಿದೆ ಎಂದು ತಿಳಿಸಿದರು. ಜ್ಞಾನ ಮತ್ತು ಸಂಸ್ಕಾರಗಳೊಂದಿಗೆ ಪಡೆದ ಶಿಕ್ಷಣವು ವ್ಯಕ್ತಿಯನ್ನು ಉತ್ತಮ ನಾಗರಿಕನನ್ನಾಗಿ ರೂಪಿಸಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದರು. ಶಿಕ್ಷಣದ ಮೂಲಕ ಸಮಾನತೆ, ಸಹೋದರತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿಕೊಂಡು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಗಳು ಯಶೋಧರ ಬಂಗೇರ ಸಲಹೆ ನೀಡಿದರು.

ಅವರು ಯುವವಾಹಿನಿ (ರಿ) ವಿಟ್ಲ ಘಟಕ ಹಾಗೂ ಗುರುಪೂಜಾ ಸೇವಾ ಸಮಿತಿ ಅಳಿಕೆ ಇದರ ಆಶ್ರಯದಲ್ಲಿ ದಿನಾಂಕ 31/05/2026 ರಂದು ನೆಕ್ಕಿತ್ತಪುಣಿಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಉಚಿತ ನೋಟ್ ಬುಕ್ ವಿತರಣಾ ಸಮಾರಂಭದಲ್ಲಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಗಳು ಯಶೋಧರ ಬಂಗೇರ ಇವರು ಗುರು ಸಂದೇಶ ನೀಡಿದರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸೀತಾರಾಮ ಪೂಜಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು
ಅಳಕೆ ಗುರುಪೂಜಾ ಸೇವಾ ಸಮಿತಿ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ, ಯುವವಾಹಿನಿ ವಿಟ್ಲ ಘಟಕದ ಅಧ್ಯಕ್ಷರಾದ ಕೆ ಟಿ ಆನಂದ ಪೂಜಾರಿ,ಕಾರ್ಯದರ್ಶಿ ಧನಲಕ್ಷ್ಮೀ ರಾಜೇಶ್, ನಾರಾಯಣಗುರು ತತ್ವ ಪ್ತಚಾರ ಅನುಷ್ಠಾನ ನಿರ್ದೇಶಕ ಅಕ್ಷಯ್ ಮರುವಾಳ, ಅಳಕೆ ಗುರುಪೂಜಾ ಸೇವಾ ಸಮಿತಿಯ ಸ್ಥಾಪಕಾದ್ಯಕ್ಷರಾದ ನೇಮಿರಾಜ್ ಅಳಿಕೆ, ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.
ನೇಮಿರಾಜ್ ಸ್ವಾಗತಿಸಿದರು, ಪ್ರವೀಣ್ ಅಳಿಕೆ ಇವರು ನಿರೂಪಿಸಿದರು, ಪರಮೇಶ್ವರ ಪೂಜಾರಿ ಧನ್ಯವಾದಗೈದರು.


