ವಿಟ್ಲ: ಯುವವಾಹಿನಿ(ರಿ) ವಿಟ್ಲ ಘಟಕದ ವತಿಯಿಂದ ದಿನಾಂಕ 22/05/2026, ಶುಕ್ರವಾರದಂದು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು. ಭಜನಾ ಸಂಕೀರ್ತನೆ. ಅತ್ಯಂತ ಶ್ರದ್ಧಾ-ಭಕ್ತಿಯಿಂದ ನೆರವೇರಿದ್ದು, ಭಾಗವಹಿಸಿದ ಭಕ್ತಾದಿಗಳ ಮನಸೂರೆಗೊಂಡಿತು. ಈ ಭಜನಾ ಸೇವೆಯಲ್ಲಿ ಯುವವಾಹಿನಿ ಘಟಕದ ಕಾರ್ಯದರ್ಶಿಗಳಾದ ಧನಲಕ್ಷ್ಮೀ ರಾಜೇಶ್ ಹಾಗೂ ಘಟಕದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.



