ಕೋಟೆಕಾರ್: ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ದಿನಾಂಕ 14-05-2026 ನೇ ಗುರುವಾರ ಸಾಯಂಕಾಲ 7 ಗಂಟೆಗೆ, ನೆತ್ತಿಲ ಕೋಟೆಕಾರಿನಲ್ಲಿರುವ ಘಟಕದ ಕಾರ್ಯದರ್ಶಿ ಸೌಮ್ಯ ಯೋಗೀಶ್ ರವರ ಗೃಹದಲ್ಲಿ ಗುರು ಸ್ಮರಣೆ-ಗುರು ಭಜನೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಯೋಗೀಶ್ ಕೋಟೆಕಾರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಪೂರ್ವಕ ಚಾಲನೆ ನೀಡಿದರು. ಘಟಕದ ಸದಸ್ಯರಿಂದ ಸುಮಧುರ ಗುರು ಭಜನಾ ಸಂಕೀರ್ತನೆ ನೆರವೇರಿತು.
ಭಜನೆಯ ಬಳಿಕ ಗುರುಗಳಿಗೆ ಮಹಾಪೂಜೆ ನಡೆದು, ಕಾಫಿ ತೀರ್ಥ ಪ್ರಸಾದ ವಿತರಿಸಲಾಯಿತು. ಘಟಕದ ಮಾಜಿ ಅಧ್ಯಕ್ಷರಾದ ಮೋಹನ್ ಮಾಡೂರು ಅವರು ಗುರು ಪೂಜೆಯಲ್ಲಿ ಕಾಫಿ ತೀರ್ಥ ಪ್ರಸಾದದ ಮಹತ್ವ ಮತ್ತು ಅದರ ವಿಶೇಷತೆಯ ಬಗ್ಗೆ ನೆರೆದಿದ್ದವರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕೊನೆಯಲ್ಲಿ ಭಕ್ತಾದಿಗಳಿಗೆ ಮತ್ತು ಸದಸ್ಯರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಘಟಕದ ಬಹುತೇಕ ಸದಸ್ಯರು ಈ ಭಜನಾ ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಗುರುವಿನ ಕೃಪೆಗೆ ಪಾತ್ರರಾದರು. ಘಟಕದ ಸೌಹಾರ್ದತೆ ಮತ್ತು ಭಕ್ತಿಭಾವಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.


