ವಿಟ್ಲ : ದಿನಾಂಕ 12/05/2026 ಮಂಗಳವಾರದಂದು ಯುವವಾಹಿನಿ ಘಟಕದ ವತಿಯಿಂದ ಹೊನ್ನಾವರದಲ್ಲಿರುವ ಜಾಲಿ ಆಂಡ್ ಜಾಲಿ ವಾಟರ್ ಪಾರ್ಕ್‌ಗೆ ಮನರಂಜನಾ ಪ್ರವಾಸವನ್ನು ಆಯೋಜಿಸಲಾಯಿತು.

ಈ ಪ್ರವಾಸದಲ್ಲಿ ಘಟಕದ ಅಧ್ಯಕ್ಷರು, ಕಾರ್ಯಕಾರಿಣಿ ಸದಸ್ಯರು ಸೇರಿದಂತೆ ಒಟ್ಟು 41 ಮಂದಿ ಭಾಗವಹಿಸಿದ್ದರು. ಬೆಳಗ್ಗಿನಿಂದಲೇ ಉತ್ಸಾಹಭರಿತವಾಗಿ ಆರಂಭವಾದ ಈ ಪ್ರವಾಸದಲ್ಲಿ ಸದಸ್ಯರು ವಿವಿಧ ಜಲಕ್ರೀಡೆಗಳು ಹಾಗೂ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತೋಷವನ್ನು ಹಂಚಿಕೊಂಡರು. ಪ್ರವಾಸದ ಅವಧಿಯು ಸ್ನೇಹ, ಸಹಕಾರ ಮತ್ತು ಸಂಘಟನಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಂತಾಗಿತ್ತು. ಎಲ್ಲಾ ಸದಸ್ಯರು ಸಂತೋಷ ಹಾಗೂ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಪ್ರವಾಸವು ಸಂಪೂರ್ಣ ಸುರಕ್ಷಿತ ಹಾಗೂ ಯಶಸ್ವಿಯಾಗಿ ನಡೆಯಿತು.
ಈ ಪ್ರವಾಸದ ಯಶಸ್ಸಿಗೆ ಸಹಕರಿಸಿದ ಅಧ್ಯಕ್ಷರು, ಕಾರ್ಯಕಾರಿಣಿ ಸದಸ್ಯರು ಹಾಗೂ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಘಟಕದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.


