ಮಂಗಳೂರು: ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ವತಿಯಿಂದ ಲೋಬೋಸ್ ರಿವರ್ ವ್ಯೂಗೆ ಏಪ್ರಿಲ್ 5, 2026ರಂದು ಒಂದು ದಿನದ ಕಿರು ಪ್ರವಾಸವನ್ನು ಆಯೋಜಿಸಲಾಗಿತ್ತು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಈ ಪ್ರವಾಸದಲ್ಲಿ ಘಟಕದ ಸದಸ್ಯರು, ಅವರ ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಸೇರಿ ಸುಮಾರು 80 ಮಂದಿ ಭಾಗವಹಿಸಿ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ಬೋಟ್‌ನಲ್ಲಿ ಸಂಚರಿಸುತ್ತಾ ಪ್ರಕೃತಿಯ ಮನಮೋಹಕ ಸೌಂದರ್ಯವನ್ನು ಕಣ್ತುಂಬಿಕೊಂಡು ಎಲ್ಲರೂ ಮನಸಾರೆ ಆನಂದಿಸಿದರು.
ಬೋಟ್ ಸಿಬ್ಬಂದಿಗಳಿಂದ ವಿವಿಧ ಆಟೋಟ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದು, ವಿಜೇತರಿಗೆ ಘಟಕದ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಜೊತೆಗೆ ಬೋಟ್‌ನ ಗಾಯಕರು, ಘಟಕದ ಸದಸ್ಯರು ಹಾಗೂ ಸಹಪ್ರಯಾಣಿಕರಿಂದ ಸಂಗೀತ ಮನರಂಜನೆ ನಡೆಯಿತು. ಎಲ್ಲರೂ ಉತ್ಸಾಹದಿಂದ ನೃತ್ಯ ಮಾಡಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.
ಪ್ರವಾಸದ ವೇಳೆ ಬಗೆಬಗೆಯ ತಿಂಡಿ-ತಿನಿಸುಗಳನ್ನು ಸವಿದು ಎಲ್ಲರೂ ಸಂತೋಷಪಟ್ಟರು. ಸಂಜೆ 4 ಗಂಟೆಗೆ ಚಹಾ ಜೊತೆ ಕಾರ್ಯಕ್ರಮ ಸಮಾಪ್ತಿಯಾಯಿತು.
ಈ ಕಿರು ಪ್ರವಾಸವು ಸದಸ್ಯರ ನಡುವೆ ಸ್ನೇಹ, ಒಗ್ಗಟ್ಟು ಮತ್ತು ಸಮ್ಮಿಲನವನ್ನು ಮತ್ತಷ್ಟು ಬಲಪಡಿಸಿದ ಕಾರ್ಯಕ್ರಮವಾಗಿ ಪರಿಣಮಿಸಿತು.


