ಬಜಪೆ: ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಏಪ್ರಿಲ್ ತಿಂಗಳ ‘ಮನೆ ಮನೆ ಭಜನಾ ಸಂಕೀರ್ತನೆ’ ಕಾರ್ಯಕ್ರಮವು ದಿನಾಂಕ 06-04-2026 ರಂದು ಸೋಮವಾರ ಸಂಜೆ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಜರುಗಿತು.

ಘಟಕದ ಸಮಾಜ ಸೇವಾ ನಿರ್ದೇಶಕರಾದ ಜಯರಾಮ ಪೂಜಾರಿ ಅವರ ನೂತನ ಗೃಹ ಪ್ರವೇಶದ ಪ್ರಥಮ ವರ್ಷದ ಆಚರಣೆಯ ಪ್ರಯುಕ್ತ, ಅವರ ನಿವಾಸದಲ್ಲಿ ಈ ಭಜನಾ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ 6.30 ರಿಂದ 7.30 ರವರೆಗೆ ನಡೆದ ಸಂಕೀರ್ತನೆಯಲ್ಲಿ ಘಟಕದ ಸದಸ್ಯರು ಭಕ್ತಿಪೂರ್ವಕವಾಗಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಬಜಪೆ ಘಟಕದ ಅಧ್ಯಕ್ಷರಾದ ರೋಹಿತ್ ಪೂಜಾರಿ, ಭಜನಾ ಸಂಚಾಲಕರಾದ ದಿವ್ಯ ಸುನಿಲ್, ವಿನೋದರ್ ಪೂಜಾರಿ, ಘಟಕದ ಮಾಜಿ ಅಧ್ಯಕ್ಷರುಗಳು ಹಾಗೂ ಹೆಚ್ಚಿನ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದು, ಶ್ರೀ ದೇವರ ಕೃಪೆಗೆ ಪಾತ್ರರಾದರು.
ಭಜನೆಯ ನಂತರ ಅತಿಥಿ ಸತ್ಕಾರ ಹಾಗೂ ಪ್ರಸಾದ ವಿತರಣೆ ನಡೆಯಿತು. ಮನೆ ಮನೆಗಳಲ್ಲಿ ಭಕ್ತಿ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಯುವವಾಹಿನಿ ಹಮ್ಮಿಕೊಳ್ಳುತ್ತಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾಯಿತು.


