ಶಕ್ತಿನಗರ : ಯುವವಾಹಿನಿ (ರಿ) ಶಕ್ತಿನಗರ ಘಟಕದ 2026-27 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ದಿನಾಂಕ 22/03/2026 ರಂದು ನಟ್ಟಿ ಸ್ಕ್ವೇರ್ ಸೊಲ್ಮೆ ಮಿನಿ ಹಾಲ್‌ನಲ್ಲಿ ನೆರವೇರಿತು. ಯುವವಾಹಿನಿ ಶಕ್ತನಗರ ಘಟಕದ ಘಟಕದ ಅಧ್ಯಕ್ಷರಾದ ಸುಜಾತ ನವೀನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಮಾಜಿ ಅಧ್ಯಕ್ಷರಾದ ಬಿ. ವಾಸುದೇವ ಕೋಟ್ಯಾನ್ ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿ, ಶುಭ ಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು, ಘಟಕದ ಮಾಜಿ ಅಧ್ಯಕ್ಷರು ಹಾಗೂ ಆಯ್ಕೆ ಸಮಿತಿಯ ಸಂಚಾಲಕರಾದ ಗಣೇಶ್ ಕೆ ಮಾಕಳಿ ನೂತನ ಸಮಿತಿಯನ್ನು ಸಭೆಗೆ ಪರಿಚಯಿಸಿದರು

ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ ಅರ್ಚಕರಾದ ಗುರುಪ್ರಸಾದ್ ಶಾಂತಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅರ್ಚಕರಾದ ನವೀನ್ ಶಾಂತಿ, ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಸೇವಾ ಟ್ರಸ್ಟ್ ಕುಂಟಲ್ಪಾಡಿ ಅಧ್ಯಕ್ಷರಾದ ತುಕಾರಾಂ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹರೀಶ್ ಪೂಜಾರಿ ಕೊಣಾಜೆ ವೇದಿಕೆಯಲ್ಲಿ
ಉಪಸ್ಥಿತರಿದ್ದರು. ನಾಗರಾಜ ಪೂಜಾರಿ ಹಾಗೂ ಕುಮಾರಿ ಭೂಮಿಕ ಇವರ ಕ್ರೀಡಾ ಕ್ಷೇತ್ರದ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು ಕಾರ್ಯದರ್ಶಿ ಚರಣ್‌ರಾಜ್ 2025-26 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು
ಮಂಗಳೂರು ದಕ್ಷಿಣ ವಿದಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಇವರು ನೂತನ ತಂಡಕ್ಕೆ ಶುಭ ಹಾರೈಕೆ ಮಾಡಿದರು ಯುವವಾಹಿನಿ ಶಕ್ತಿನಗರ ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರತಿಜ್ಞೆವಿಧಿ ಸ್ವೀಕರಿಸಿದ ತೇಜಸ್ ವಿ. ಪೂಜಾರಿ ಮಾತನಾಡಿ ಹಿರಿಯರ ಮಾರ್ಗದರ್ಶನ ಹಾಗೂ ಘಟಕದ ಸದಸ್ಯರ ಸಹಕಾರದಿಂದ ಮುಂದಿನ ಒಂದು ವರ್ಷದಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸವಿದೆ ಎಂದರು ಮಾಜಿ ಅಧ್ಯಕ್ಷರಾದ ಭಾರತಿ ಗಣೇಶ್ ಪ್ರಸ್ತಾವನೆ ಮಾಡಿದರು ನೂತನ ಕಾರ್ಯದರ್ಶಿ ಸಮಾ ಪ್ರತಿಭಾ ಶಶಿರಾಜ್ ಧನ್ಯವಾದ ಸಮರ್ಪಿಸಿದರು. ಸುಜಾತ ನವೀನ್ ಸ್ವಾಗತಿಸಿದರು ಪ್ರತೀಶ್ ಕಾರ್ಯಕ್ರಮ ನಿರೂಪಿಸಿದರು


