ಉಪ್ಪಿನಂಗಡಿ : ಸೂರ್ಯ ಆಸ್ಪತ್ರೆ ಉಪ್ಪಿನಂಗಡಿ ಇದರ ಪ್ರಥಮ ವರ್ಷಾಚರಣೆಯ ಅಂಗವಾಗಿ, ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಜೆಸಿಐ ಉಪ್ಪಿನಂಗಡಿ, ರೋಟರಿ ಕ್ಲಬ್ ಉಪ್ಪಿನಂಗಡಿ, ಹವ್ಯಕ ವಲಯ ಉಪ್ಪಿನಂಗಡಿ, ಇಂಡಿಯನ್ ಕ್ಯಾಥೋಲಿಕ್ ಯೂತ್ ಮೆಂಬರ್ಸ್ (ICYM), ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 22/03/2026 ರಂದು ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಡಾ. ಕೆ.ಜಿ. ಭಟ್ ಹಾಗೂ ಖ್ಯಾತ ದಂತ ವೈದ್ಯರಾದ ಡಾ. ರಾಜರಾಮ್ ಕೆ.ಬಿ. ಅವರು ಉದ್ಘಾಟಿಸಿದರು “ರಕ್ತದಾನವು ಮಾನವನಿಂದ ಮಾನವನಿಗೆ ನೀಡಬಹುದಾದ ಅತ್ಯಮೂಲ್ಯ ದಾನವಾಗಿದೆ. ರಕ್ತವೆಂಬುದು ಎಲ್ಲರಲ್ಲಿಯೂ ಒಂದೇ ಆಗಿರುವಾಗ ಜಾತಿ-ಮತ ಬೇಧಗಳ ಅರ್ಥವೇ ಇಲ್ಲ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಅನುಗುಣವಾಗಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು” ಎಂದು ಡಾ ರಾಜಾರಾಮ್ ತಿಳಿಸಿದರು
ಈ ಸಂದರ್ಭದಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಮನೋಜ್ ಎನ್. ಸಾಲ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕಡಬ, ರೋಟರಿ ಕ್ಲಬ್ ಅಧ್ಯಕ್ಷ ಕೆನ್ಯೂಟ್ ಮಸ್ಕರೇನಸ್, ಹವ್ಯಕ ವಲಯದ ಅಧ್ಯಕ್ಷ ರಾಮ ಭಟ್, ಐಸಿವೈಎಂ ಅಧ್ಯಕ್ಷ ವಿಶಾಲ್, ಹಿರಿಯ ವೈದ್ಯರಾದ ಡಾ. ಸದಾನಂದ ಕುಂದರ್ ಹಾಗೂ ಡಾ. ಗೋವಿಂದಪ್ರಸಾದ್ ಕಜೆ ಉಪಸ್ಥಿತರಿದ್ದರು.
ಯುವವಾಹಿನಿಯ ಗೌರವ ಸಲಹೆಗಾರರಾದ ವರದರಾಜ್ ಎಂ., ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕಲ್ಲೇರಿ, ಜನಾರ್ಧನ ನೂಜ, ಡಾ. ಆಶಿತ್ ಎಂ.ವಿ., ಸೋಮಸುಂದರ್ ಕೊಡಿಪ್ಪಾನ, ನಾಣ್ಯಪ್ಪ ಕೋಟ್ಯಾನ್, ಉಪಾಧ್ಯಕ್ಷ ಅಂಕಿತ್ ಎಂ.ಜೆ., ಕಾರ್ಯದರ್ಶಿ ರಮೇಶ್ ಎಸ್. ಸಾಂತ್ಯ, ನಿರ್ದೇಶಕರಾದ ಮಾಧವ ಬಿ.ಕೆ., ಸಂತೋಷ್ ಬಾರ್ಯ, ವಸಂತ ಕಜೆ ಹಾಗೂ ಸದಸ್ಯರಾದ ಜಯಾನಂದ ಪೆಲತ್ತಾಜೆ ಮತ್ತು ದಿನೇಶ್ ಸುಣ್ಣಾಜೆ ರಕ್ತದಾನ ಮಾಡಿ ಕಾರ್ಯಕ್ರಮಕ್ಕೆ ಅರ್ಥಪೂರ್ಣತೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೂರ್ಯ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಾಜೇಶ್ ಭಟ್ ಅವರು ಪ್ರಸ್ತಾವನೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಜೆಸಿಐ ಅಧ್ಯಕ್ಷರಾದ ಅವನೀಶ್ ವಂದಿಸಿದರು. ಸುಮಂತ್ ಕಾರ್ಯಕ್ರಮವನ್ನು ನಿರೂಪಿಸಿದರು.


