ಉಡುಪಿ : ಸಮುದಾಯದ ಉನ್ನತಿಗೆ ಭೌದ್ದಿಕ ವಿಕಸನದೊಂದಿಗೆ ಸಾಂಸ್ಕೃತಿಕ ವಿಚಾರಧಾರೆಗಳು ಅವಶ್ಯಕ. ಈ ನಿಟ್ಟಿನಲ್ಲಿ ಯುವವಾಹಿನಿಯು ಯುವ ಮನಸ್ಸುಗಳಿಗೆ ಸೂಕ್ತ ಪ್ರೋತ್ಸಾಹ ನೀಡಿ ಸೃಜನಶೀಲತೆಯನ್ನು ಸದ್ವಿನಿಯೋಗಪಡಿಸುತ್ತಿದೆ ಎಂದು ನಾರಾಯಣಗುರು ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀ ಮುದ್ರಾಡಿ ಮಂಜುನಾಥ ಪೂಜಾರಿ ಅಭಿಪ್ರಾಯಪಟ್ಟರು. ಸಾಂಸ್ಕೃತಿಕ ಪ್ರಜ್ಞೆಗಳು ವ್ಯಕ್ತಿಗಳಲ್ಲಿ ಸೃಜನಶೀಲತೆಯನ್ನು ಸೃಷ್ಟಿಸುತ್ತಿದ್ದು, ಉತ್ತಮ ವಿಚಾರಧಾರೆಗಳು, ನೈಜ್ಯ ಇತಿಹಾಸಗಳ ಸಂದೇಶವನ್ನು ಬಿತ್ತರಿಸುವಲ್ಲಿ ನಿರಂತರ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಯುವವಾಹಿನಿಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಯತರು ದಿನಾಂಕ 28-02-2062,ಶನಿವಾರ ,ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ಜರಗಿದ ಉಡುಪಿ ಘಟಕದ ರಜತ ಸಂಭ್ರಮ ಪ್ರಯುಕ್ತ ಹಮ್ಮಿಕೊಂಡ ಉಡುಪಿ ಜಿಲ್ಲಾ ಮಟ್ಟದ ಬಿಲ್ಲವ ಸಂಘಗಳ ಸಾಂಸ್ಕೃತಿಕ ಸ್ಪರ್ಧೆ “ಯುವಸಂಗಮ” ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ದಯಾನಂದ ಕರ್ಕೇರ ವಹಿಸಿದ್ದರು.
ರಜತ ಸಂಭ್ರಮ ಸಂಚಾಲಕರಾದ ರಘುನಾಥ್ ಮಾಬಿಯಾನ್ ಗೌರವ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಪಾಂಗಾಳ ಗುಡ್ಡೆ ಗರೋಡಿಯ ಸುಧಾಕರ ಡಿ ಅಮೀನ್, ಉಡುಪಿ ನಾರಾಯಣ ಗುರು ಯುವ ವೇದಿಕೆಯ ಗೌರವಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಹೂಡೆ ಗಜಾನನ ಬಿಲ್ಲವರ ಸೇವಾ ಸಂಘದ ಗೌರವಾಧ್ಯಕ್ಷರಾದ ಜಯಪ್ರಕಾಶ್ ಬಿ , ಉಪ್ಪೂರು ಬಿಲ್ಲವ ಸಂಘದ ಅಧ್ಯಕ್ಷರಾದ ರಾಜು ಪೂಜಾರಿ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ , ಯುವ ಸಂಗಮ ಸಂಯೋಜಕರಾದ ರಾಕೇಶ್ ಕಟಪಾಡಿ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್ ಫಲಿತಾಂಶ ಪಟ್ಟಿ ಪ್ರಕಟಿಸಿದರು. ಬಿಲ್ಲವ ಸೇವಾ ಸಂಘ ಬಾರ್ಕೂರು
ಪ್ರಥಮ , ಬಿಲ್ಲವ ಸೇವಾ ಸಂಘ ಕಡೆಕಾರ್ ದ್ವಿತೀಯ, ರಾಮಕೃಷ್ಣ ಭಜನಾ ಮಂದಿರ ,ಕುತ್ಪಾಡಿ ತೃತೀಯ ಸ್ಥಾನವನ್ನು ಪಡೆದರು. ಅಂಬಲಪಾಡಿ ಬಿಲ್ಲವ ಸೇವಾ ಸಂಘ ಹಾಗೂ ಬ್ರಹ್ಮಾವರ ಬಿಲ್ಲವ ಸೇವಾ ಸಂಘ ವೈಯಕ್ತಿಕ ವಿಶೇಷ ಬಹುಮಾನ ಪಡೆದರು.
ಮಾಜಿ ಅಧ್ಯಕ್ಷರಾದ ಶ್ರೀ ಭಾಸ್ಕರ ಸುವರ್ಣ ಸ್ವಾಗತಿಸಿದರು .ಮಾಜಿ ಅಧ್ಯಕ್ಷರಾದ ಶ್ರಿ ದಯಾನಂದ ಪೂಜಾರಿ ವಂದಿಸಿದರು. ಶರತ್ ಕುಮಾರ್ ಅಡ್ವೆ ಹಾಗೂ ಶ್ರೀಮತಿ ನಿಶಾ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.


