ಉಡುಪಿ : ಸದಭಿರುಚಿಯ ಚಟುವಟಿಕೆಗಳು ಪ್ರತಿಭಾ ಪರಿಶೋಧದ ಜೊತೆಗೆ ಸ್ನೇಹ,ಸೌಹಾರ್ದ ಸಂಬಂಧವನ್ನೂ ಸಾಧ್ಯವಾಗಿಸುತ್ತದೆ. ಸಂಸ್ಕೃತಿ,ಸಂಸ್ಕಾರಗಳನ್ನು ಪ್ರಸ್ತುತಪಡಿಸುವುದರಿಂದ ಸಮುದಾಯದ ಸಂವರ್ಧನೆಗೂ ಕಾರಣವಾಗುತ್ತದೆ. ವಿವಿಧ ಆಸಕ್ತಿಗಳ ಜೊತೆಗೆ ಸಜ್ಜುಗೊಳ್ಳುವ ಸಾಂಸ್ಕೃತಿಕ ಪ್ರಕಾರಗಳು ಅನ್ಯೋನ್ಯತೆಯ ಪ್ರತೀಕವಾಗಿ ಸಂಘಟನೆಗೆ ಶಕ್ತಿ ತುಂಬುತ್ತದೆ ಎಂದು ಹಿರಿಯ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟರು.

ಶ್ರೀಯುತರು ದಿನಾಂಕ 28-02-2026,ಶನಿವಾರದಂದು ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ಜರಗಿದ ಉಡುಪಿ ಘಟಕದ ರಜತ ಸಂಭ್ರಮ ಪ್ರಯುಕ್ತ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಸಂಘಗಳಿಗೆ ಆಯೋಜಿಸಲಾದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು “ಬೆರ್ಮ ಸುತ್ತೆ” ಪ್ರತಿಷ್ಠಾಪಿಸುವುದರ ಮೂಲಕ ಉದ್ಘಾಟಿಸಿದರು. ಘಟಕಾಧ್ಯಕ್ಷರಾದ ದಯಾನಂದ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಜತ ಸಂಭ್ರಮ ಸಂಚಾಲಕರಾದ ರಘುನಾಥ್ ಮಾಬಿಯಾನ್ ಗೌರವ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕರಾದ ಯಶ್‌ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ,ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಶಶಿಧರ ಅಮೀನ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಉಪಾಧ್ಯಕ್ಷರಾದ ಬಿ ಎನ್ ಶಂಕರ ಪೂಜಾರಿ, ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ಬಿಲ್ಲವ ಸಂಘದ ಅಧ್ಯಕ್ಷರಾದ ಗೋಪಾಲ್ ಸಿ ಬಂಗೇರ, ಉಡುಪಿ ಘಟಕ ಸ್ಥಾಪಕ ಅಧ್ಯಕ್ಷರಾದ ಚಂದ್ರಶೇಖರ್ ಉದ್ಯಾವರ, ಯುವ ಸಂಗಮ ಸಂಯೋಜಕ ರಾಕೇಶ್ ಕಟಪಾಡಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ನಾರಾಯಣ ಬಿಎಸ್ ಸ್ವಾಗತಿಸಿದರು. ದಯಾನಂದ ಎಂ ಪೂಜಾರಿ ವಂದಿಸಿದರು.
ಶರತ್ ಕುಮಾರ್ ಅಡ್ವೆ ಹಾಗೂ ನಿಶಾ ಮನೀಷ್ ಕಾರ್ಯಕ್ರಮ ನಿರೂಪಿಸಿದರು.


