ಕುಳಾಯಿ : ಯುವವಾಹಿನಿ ಸುರತ್ಕಲ್ ಘಟಕದ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ದಿನಾಂಕ 08.03.2026 ರಂದು ಕುಳಾಯಿ ಮಹಿಳಾ ಮಂಡಲದಲ್ಲಿ ಆಯೋಜಿಸಲಾಗಿತ್ತು.

ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಕುಳಾಯಿ, ಮಹಿಳಾ ಮಂಡಲ (ರಿ) ಕುಳಾಯಿ, ತಿರಂಗ ಟ್ರಸ್ಟ್ (ರಿ) ಮಂಗಳೂರು, ಶ್ರೀನಿವಾಸ ಆಸ್ಪತ್ರೆ ಮುಕ್ಕ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ನಡೆಯಿತು.
ಮಹಿಳಾ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ರೋಗಿಗಳ ಪ್ರಾಣ ಉಳಿಸುವ ಉದಾತ್ತ ಉದ್ದೇಶದಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶ್ರೀನಿವಾಸ ಆಸ್ಪತ್ರೆ ಮುಕ್ಕ ಇದರ ವೈದ್ಯಕೀಯ ತಂಡವು ರಕ್ತ ಸಂಗ್ರಹಣೆಯ ಜವಾಬ್ದಾರಿಯನ್ನು ಹೊತ್ತಿತ್ತು.


