ಮಂಗಳೂರು: ಸಂಪರ್ಕ ವೆಬ್‌ಸೈಟ್ (samparka.yuvavahini.in) ಮೂಲಕ ಯುವವಾಹಿನಿ ಸಂಸ್ಥೆಯ ಎಲ್ಲಾ ಹಣಕಾಸು ರಶೀದಿಗಳನ್ನು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಈ ಹಿನ್ನಲೆಯಲ್ಲಿ ಪ್ರತಿ ಸದಸ್ಯರು ಹಾಗೂ ದಾನಿಗಳು ತಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿ (OTP) ಬಳಸಿ ತಮ್ಮ ರಶೀದಿಗಳನ್ನು ಆನ್‌ಲೈನ್ ಮೂಲಕ ವೀಕ್ಷಿಸುವ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಅಳವಡಿಸಲಾಗಿದೆ.

ಆನ್‌ಲೈನ್ ಮೂಲಕ ಅಪ್‌ಡೇಟ್ ಆಗಿರುವ ಪ್ರಥಮ ರಶೀದಿಯ ಮುದ್ರಿತ ಪ್ರತಿಯನ್ನು (Hard Copy) ದಿನಾಂಕ 25.01.2026 ರಂದು ನಡೆದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಮಾಸಿಕ ಸಭೆಯಲ್ಲಿ, ಅಧಿಕ ಮೊತ್ತದ ಜಾಹಿರಾತು ನೀಡಿ ಕೇಂದ್ರ ಸಮಿತಿಯ ಆರ್ಥಿಕ ಭಾರವನ್ನು ಕಡಿಮೆಗೊಳಿಸಿದ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ ನಡುಬೈಲು ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಪ್ರಧಾನ ಕಾರ್ಯದರ್ಶಿ ರೇಖಲತಾ, ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್, ದ್ವಿತೀಯ ಉಪಾಧ್ಯಕ್ಷ ಸುರೇಶ್ ಪೂಜಾರಿ, ಪ್ರಚಾರ ನಿರ್ದೇಶಕ ಶಿವಪ್ರಸಾದ್ ನೂಚಿಲ, ಯುವಸಿಂಚನ ಸಂಪಾದಕ ಹರೀಶ್ ವಿ. ಪಚ್ಚನಾಡಿ ಹಾಗೂ ಸಾಮಾಜಿಕ ಜಾಲತಾಣ ಸಂಪಾದಕ ರಾಜೇಶ್ ಸುವರ್ಣ ಉಪಸ್ಥಿತರಿದ್ದರು.


