Yuvavahini

JAN 12, 2026 10.00 AM IST

ಯುವವಾಹಿನಿ (ರಿ.) ಕೇಂದ್ರ ಸಮಿತಿ , ಮಂಗಳೂರು

ಯುವವಾಹಿನಿ (ರಿ.) : ಸಂಘಟನೆಯ ಸಂಕ್ಷಿಪ್ತ ಮಾಹಿತಿ

ಸಂಘಟನೆಯ ಹೆಸರು :ಯುವವಾಹಿನಿ (ರಿ.)
ಸ್ಥಾಪನೆ : 02-10-1987
ನೊಂದಾವಣೆ : ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಪ್ರಕಾರ ದ.ಕ. ಜಿಲ್ಲಾ ಸಂಘಗಳ ನೋಂದವಣಾಧಿಕಾರಿ (Registrar)ಯವರ ಕಛೇರಿಯಲ್ಲಿ ನೊಂದಾವಣೆಗೊಂಡಿರುತ್ತದೆ.
ನೋಂದಣಿ ಸಂಖ್ಯೆ : 30:89-90

ಪ್ರಸಕ್ತ ವಿಳಾಸ : ರಘು ಬಿಲ್ಡಿಂಗ್, 3ನೇ ಮಹಡಿ, ಉರ್ವಾಸ್ಟೋರ್, ಅಶೋಕ ನಗರ ಅಂಚೆ, ಮಂಗಳೂರು – 575006
Mob.: 9448463345
email : yuvavahinicentral@gmail.com
website: www.yuvavahini.in
Member website :www.samparka.yuvavahini.in

ಪ್ರಶಸ್ತಿ : 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘಟನೆ
ಧ್ಯೇಯಗಳು : ವಿದ್ಯೆ, ಉದ್ಯೋಗ, ಸಂಪರ್ಕ
ಸಂಘಟನೆಯ ರಚನೆ : ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಹಾಗೂ ಘಟಕಗಳು
ಸಂಘಟನೆಯ ಮುಖವಾಣಿ: “ಯುವಸಿಂಚನ” ಪತ್ರಿಕೆ
ಸಂಘಟನೆಯ ಅಧೀನ ಟ್ರಸ್ಟ್ :ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ.)
ಉಪಸಮಿತಿ : ವಿಶುಕುಮಾ‌ರ್ ದತ್ತಿನಿಧಿ ಸಮಿತಿ, ಯುವಸಿಂಚನ ಸಂಪಾದಕ ಮಂಡಳಿ, ಸಾಮಾಜಿಕ ಜಾಲತಾಣ ಸಂಪಾದಕ ಮಂಡಳಿ


ಉಪನಿಬಂಧನೆ ಸಮಗ್ರ ಪರಿಷ್ಕರಣೆ : 26-06-2022
ಉಪನಿಬಂಧನೆ ತಿದ್ದುಪಡಿ : 26-05-2024
ಉಪನಿಯಮ ರಚನೆ: 29-07-2018
ಉಪನಿಯಮ ತಿದ್ದುಪಡಿ : 26-05-2024

ಉದ್ದೇಶ :
ಬಿಲ್ಲವ ಸಮಾಜದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಪ್ರಜ್ಞೆ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಮೂರು ಮುಖ್ಯ ಧೈಯಗಳನ್ನು ಇಟ್ಟುಕೊಂಡು ಬಿಲ್ಲವ ಯುವ ಜನಾಂಗದ ಸಂಘಟನೆಗಾಗಿ ಈ ಕೆಳಗಿನ ಉದ್ದೇಶಗಳನ್ನಿರಿಸಿಕೊಂಡು ಸ್ಥಾಪಿಸಲ್ಪಟ್ಟು, ಶಾಸನ ಬದ್ಧವಾಗಿ ನೊಂದಾಯಿಸಲ್ಪಟ್ಟ ಒಂದು ಸಂಸ್ಥೆ.
1. ಬಿಲ್ಲವ ಸಮಾಜವನ್ನು ಸಂಘಟಿಸುವರೇ ಪ್ರೇರಕ ಶಕ್ತಿಯಾದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮತ್ತು ಅವರ ಬೋಧನೆಗಳ ಸಾರವನ್ನು ಪ್ರತಿಪಾದಿಸುವುದು.
2. ಯುವ ಜನರಲ್ಲಿ ನಾಯಕತ್ವ ಮತ್ತು ರಾಜಕೀಯ ಪ್ರಜ್ಞೆಯನ್ನು ಮೂಡಿಸುವುದರ ಮೂಲಕ ಸಂಸತ್, ಶಾಸನ ಸಭೆ, ಸ್ಥಳೀಯ ಆಡಳಿತಗಳಲ್ಲಿ ಸಮಾಜ ಬಾಂಧವರನ್ನು ಪ್ರತಿನಿಧಿಸುವಲ್ಲಿ ಬಿಲ್ಲವ ಯುವ ಜನಾಂಗವನ್ನು ಸಂಘಟಿಸುವುದು.
3. ಸಮಾಜದ ಯುವ ಜನರಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ, ಸಾಹಿತ್ಯ, ಕ್ರೀಡೆ ಇವುಗಳ ಬಗ್ಗೆ ಅರಿವು ಮೂಡಿಸುವುದು, ಸಮಾಜದಲ್ಲಿ ವಿಶಿಷ್ಟ ಸಾಧನೆಗೈದ ಸಮಾಜ ಬಾಂಧವರನ್ನು ಮತ್ತು ಸಂಘ-ಸಂಸ್ಥೆಗಳನ್ನು ಗುರುತಿಸಿ ಅವರನ್ನು ಪುರಸ್ಕರಿಸುವುದು. ಯುವಜನರಿಗೆ ಅವರ ಪ್ರತಿಭೆಯ ವಿಕಸನಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸುವುದು.
4. ಸಮಾಜದ ಅರ್ಹ ವಿದ್ಯಾವಂತ ಯುವಕ-ಯುವತಿಯರಿಗೆ ಸರಕಾರಿ ಯಾ ಖಾಸಗಿ ಸಂಸ್ಥೆಗಳಲ್ಲಿರುವ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡುವುದು. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ತರಬೇತಿ ನೀಡುವುದು.
5. ಬಿಲ್ಲವ ಸಮಾಜದ ಸಮಗ್ರ ಸಂಘಟನೆಗಾಗಿ ಘಟಕಗಳನ್ನು ಸ್ಥಾಪಿಸುವುದು. ಈ ಮೂಲಕ ಯುವಕರಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರುವರೇ ಮಾರ್ಗದರ್ಶನ ನೀಡುವುದು. ಬಿಲ್ಲವ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನಗಳ ಮೂಲಕ ಕಾಠ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
6. ಸಮಾಜದ ಯುವ ಜನಾಂಗವು ವಿದ್ಯಾಭ್ಯಾಸವನ್ನು ಪಡೆಯುವ ಸಲುವಾಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದು. ಉನ್ನತ ಶಿಕ್ಷಣಕ್ಕಾಗಿ ಸಮಾಜದ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು. ಇಲ್ಲವೇ ಅಂತಹ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸುವುದು. ಉನ್ನತ ವ್ಯಾಸಂಗದ ಬಗ್ಗೆ ಮಾಹಿತಿ ಹಾಗೂ ತರಬೇತಿಗಳನ್ನು ವ್ಯವಸ್ಥೆಗೊಳಿಸುವುದು. ಸಹಕಾರಿ ಸಂಘಗಳ ಸ್ಥಾಪನೆ, ವೃತ್ತಿಪರ ಶಿಕ್ಷಣದ ಬಗ್ಗೆ ಸಂಬಂಧಪಟ್ಟವರಿಂದ ತರಬೇತಿಯನ್ನು ಕೊಡಿಸುವುದು. ವಸತಿ ನಿಲಯಗಳನ್ನು ಸ್ಥಾಪಿಸುವುದು, ಸ್ವ-ಉದ್ಯೋಗ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ತರಬೇತಿಯನ್ನು ನೀಡುವುದು, ಸಮಾಜದ ಪ್ರಸ್ತುತ ಆಗು-ಹೋಗುಗಳ ಬಗ್ಗೆ ಅರಿವು ಮೂಡಿಸುವರೇ ಪತ್ರಿಕೆಗಳನ್ನು ಹೊರಡಿಸುವುದು, ಸಮಾಜದ ಪ್ರತಿಭಾವಂತರನ್ನು ಗುರುತಿಸುವುದು ಮತ್ತು ಅವರ ಪ್ರತಿಭೆಗಳ ವಿಕಸನಕ್ಕೆ ತನ್ನದೇ ಪತ್ರಿಕೆಗಳ ಮೂಲಕ ಅವರಿಗೆ ಅವಕಾಶ ಮಾಡಿಕೊಡುವುದು.
7. ಬಿಲ್ಲವ ಸಮಾಜದ ಸಮಗ್ರ ಅಭಿವೃದ್ಧಿಗೋಸ್ಕರ ಸಂಘಟನಾತ್ಮಕ ಕಾಠ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
8. ಸಮಾಜದ ಮಹಿಳೆಯರನ್ನು ಸಂಘಟಿಸಿ, ಮಹಿಳಾ ಘಟಕಗಳನ್ನು ಸ್ಥಾಪಿಸುವುದು ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸುವುದು. ವರದಕ್ಷಿಣೆ ಮತ್ತು ವ್ಯವಸ್ಥೆಗೊಳಿಸುವುದು. ರಹಿತ ಸರಳವಿವಾಹ, ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹ ನೀಡುವುದು
9. ಸಮಾಜದ ಒಳಿತಿಗಾಗಿ ನಡೆಸುವ ಕಾರ್ಯ ಚಟುವಟಿಕೆಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶ್ವಸ್ಥ ಮಂಡಳಿ(ಟ್ರಸ್ಟ್)ಗಳನ್ನು ರಚಿಸುವುದು.
10. ಯುವ ಜನತೆ ದುರ್ವ್ಯಸನ, ದುಶ್ಚಟಗಳಿಗೆ ಬಲಿಬೀಳದಂತೆ ಮನವೊಲಿಸುವುದು ನಡೆಸುವುದು. ಹಾಗೂ ಅವರಲ್ಲಿ ಸಾತ್ವಿಕ ಗುಣಗಳನ್ನು ತುಂಬುವ ಕಾರ್ಯಕ್ರಮಗಳನ್ನು
11. ಯುವ ಜನತೆಯಲ್ಲಿ ಉದ್ಯಮಶೀಲತೆಯನ್ನು ಬೆಳೆಸುವುದು.

ಸಾಮಾಜಿಕ ಜಾಲತಾಣ ಸಂಪಾದಕ ಮಂಡಳಿ 2025-26
ದಿನಾಂಕ : 12.01.2026

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!