ಯುವವಾಹಿನಿ (ರಿ.) ಕಾರ್ಕಳ ಘಟಕದ ಆಶ್ರಯದಲ್ಲಿ 6ನೇ ವರ್ಷದ “ಯುವವಾಹಿನಿ ಪೊರ್ಲಾ ಬಾಲೆ – 2025” ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಡಿಸೆಂಬರ್ 23ರಂದು ಮಂಗಳವಾರ ಸಂಜೆ 5.30ಕ್ಕೆ ಕಾರ್ಕಳದ ಶ್ರೀ ಕೃಷ್ಣ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಕೆರ್ವಾಸೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಾಲ್ ಕುಮಾರ್, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಸಹ ಶಿಕ್ಷಕರ ಸಂಘ ಬೆಂಗಳೂರು ಕಾರ್ಕಳ ಶಾಖೆಯ ಅಧ್ಯಕ್ಷ ಆನಂದ ಪೂಜಾರಿ ಮಾಳ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯದ ಅಧ್ಯಕ್ಷ ಶ್ರೀ ಪ್ರಮೋದ್ ಚಂದ್ರ ಪೈ, ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಭರತನಾಟ್ಯದಲ್ಲಿ ಗಿನ್ನಿಸ್ ದಾಖಲೆ ಸಾಧನೆ ಮಾಡಿದ ವಿದುಷಿ ದೀಕ್ಷಾ, ಶಿವರಾಮ ಕಾರಂತ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ಪೂಜಾರಿ, ಯುವವಾಹಿನಿ ಯುವ ಸಾಹಿತಿ ಪ್ರಶಸ್ತಿ ಪುರಸ್ಕೃತೆ ಚೈತ್ರ ಕಬ್ಬಿನಾಲೆ, ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯ ಪ್ರಶಸ್ತಿ ವಿಜೇತ ಆಯುಷ್ ಆರ್. ಪೂಜಾರಿ, ಯೋಗ ಕ್ಷೇತ್ರದ ಸಾಧಕಿ ಅನ್ವಿ ಎಚ್. ಅಂಚನ್ ಇವರನ್ನು ಸನ್ಮಾನಿಸಲಾಯಿತು.
0–3 ವರ್ಷ ಪುಟಾಣಿ ವಿಭಾಗದಲ್ಲಿ
ಪ್ರಥಮ: ನಮಿಶ್ ಗಂಜಿಮಠ
ದ್ವಿತೀಯ: ಶಿವಿಷ್ಟ ಸುಹಾನ್ ಪೂಜಾರಿ (ಕೊಂಚಾಡಿ, ಮಂಗಳೂರು)
ತೃತೀಯ: ಝಿಯಾನ ಕ್ಯಾಸ್ಟಲಿನೊ (ಮಿಯಾರು)
ಆಯೋಜಕರ ಮೆಚ್ಚುಗೆಗೆ ಪಾತ್ರರಾದ ಫೋಟೋಗಳಲ್ಲಿ ಅದ್ಯ ವಿಶಾಲ್ ಸಾಲಿಯಾನ್, ತಸ್ವಿ ಕರ್ಕೇರ (ಬೆಳುವಾಯಿ), ಶಿವ್ಯ ಶೆಟ್ಟಿಗಾರ್ (ಬೇಲೂರು), ಆರುಷಿ, ಅಥರ್ವ ಎಸ್ (ಊಪಿನಂಗಡಿ), ಕಾರುಣ್ಯಾ ಎಸ್. ಪೂಜಾರಿ ಸೇರಿದ್ದರು.
3–5 ವರ್ಷ ಒಳಗಿನ ಮಕ್ಕಳ ವಿಭಾಗದಲ್ಲಿ
ಪ್ರಥಮ: ಸಾನ್ವಿ (ಪತ್ಹೊಂಜಿಕಟ್ಟೆ)
ದ್ವಿತೀಯ: ಲೆನೋರ ರೋಜ್ ಡಿಸೋಜಾ
ತೃತೀಯ: ರುದ್ವಿ ಪೂಜಾರಿ (ಸಾಣೂರು)

ನಿಕಟಪೂರ್ವ ಅಧ್ಯಕ್ಷೆ ಮಮತಾ ಅಂಚನ್ ಸ್ವಾಗತಿಸಿದರು ಕಾರ್ಯದರ್ಶಿ ರಾಕೇಶ್ ಅಮೀನ್ ಅವರು ಧನ್ಯವಾದ ಸಮರ್ಪಿಸಿದರು. ಸಾಂಸ್ಕೃತಿಕ ಸೌಹಾರ್ದತೆ ಮತ್ತು ಮಕ್ಕಳ ಪ್ರತಿಭಾ ಪ್ರದರ್ಶನದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.


