
ಮಂಗಳೂರು: ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ನಡೆದ ವರ್ಷಾವಧಿ ಉತ್ಸವದ ಅಂಗವಾಗಿ ದಿನಾಂಕ 02-01-2026 ಹಾಗೂ 05-01-2026ರಂದು ಸ್ವಯಂಸೇವಾ ಕಾರ್ಯಗಳನ್ನು ನಡೆಸಲಾಯಿತು.ಉತ್ಸವದ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಸ್ವಯಂಸೇವೆಯಲ್ಲಿ ತೊಡಗಿ ವಿವಿಧ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅಲ್ಲದೆ, ಘಟಕದ ಸದಸ್ಯರಿಂದ ಸಂಗ್ರಹಿಸಲಾದ ರೂ.12,500 ಮೊತ್ತದ ದೇಣಿಗೆಯನ್ನು ಅನ್ನದಾನ ಸೇವೆಗೆ ಸಮರ್ಪಿಸಲಾಯಿತು.ಈ ಸ್ವಯಂಸೇವಾ ಕಾರ್ಯವು ಯುವವಾಹಿನಿ ಕಂಕನಾಡಿ ಘಟಕದ ಸೇವಾ ಮನೋಭಾವ, ಸಂಘಟನಾ ಶಕ್ತಿ ಹಾಗೂ ಸಮಾಜಮುಖಿ ಚಟುವಟಿಕೆಗಳ ಪ್ರತಿಬಿಂಬವಾಗಿತ್ತು.


