Yuvavahini

AUG 08, 2010 11.14 AM IST

ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು

ಜಯರಾಮ ಕಾರಂದೂರ್ – ಅಧ್ಯಕ್ಷರು -2009-10

ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಮನೆತನಗಳಾದ ಕಾರಂದೂರು ಹಾಗೂ ಪಡುಪಾಲ್ಜಾಲು ಮನೆತನದ ಪಡುಪಾಲ್ಜಾಲು ಪದ್ಮ ಪೂಜಾರಿ ಮತ್ತು ಶ್ರೀಮತಿ ಲಕ್ಷ್ಮಿ ಪಿ. ಪೂಜಾರಿಯವರ ಸುಪುತ್ರರಾದ ಇವರು ಬಿ.ಎ. ಪದವೀಧರ. 7ನೇ ತರಗತಿಯಲ್ಲಿ ಶಾಲಾ ವಿದ್ಯಾರ್ಥಿ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. M.C.F. Ltd ಕಂಪೆನಿಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ, ಎರಡು ಬಾರಿ ಸಿಂಚನ ಜಾಹಿರಾತಿನ ಸಂಚಾಲಕರಾಗಿ ಯುವವಾಹಿನಿ ವಾರ್ಷಿಕ ಸಮಾವೇಶದ ಸಂಚಾಲಕರಾಗಿ, ಮಂಗಳೂರು ಶ್ರೀ ಗೋಕರ್ಣನಾಥ ಕೋ ಓಪರೇಟಿವ್ ಬ್ಯಾಂಕ್.ಲಿ.ನ ಎರಡು ಅವಧಿಯಲ್ಲಿ ನಿರ್ದೇಶಕರಾಗಿರುತ್ತಾರೆ.

ಯೂತ್ ಸರ್ವಿಸ್ ಕೌನ್ಸಿಲ್ ಮಂಗಳೂರು ಇದರ ಸದಸ್ಯರಾಗಿ, ಇಂಟರ್ ನ್ಯಾಶನಲ್ ಸಂಸ್ಥೆಯಾದ ಮಂಗಳೂರು ಜೂನಿಯರ್ ಛೇಂಬರ್‌ರಿನ ಸದಸ್ಯರಾಗಿ, 1996-97 ರಲ್ಲಿ ಮಂಗಳೂರು ಜೂನಿಯರ್ ಛೇಂಬರ್ (JC) ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇವರ ಅಧ್ಯಕ್ಷೀಯ ಅವಧಿಯಲ್ಲಿ ನಡೆದಂತಹ ಜೇಸಿ ಸಪ್ತಾಹ 97 ಕಾರ್ಯಕ್ರಮಕ್ಕೆ ವಲಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಪುರಸ್ಕಾರ ಪಡೆದು ಉತ್ತಮ ಅಧ್ಯಕ್ಷ ಪುರಸ್ಕಾರ ಹಾಗೂ ಜೇಸಿ ಅಂದೋಲನದಲ್ಲಿ ಉತ್ತಮ ಕೆಲಸ ಮಾಡಿದ ಅಧ್ಯಕ್ಷರುಗಳಿಗೆ ಕೊಡುವಂತಹ ಪ್ರತಿಷ್ಠಿತ ಪುರಸ್ಕಾರವಾದ HGF ಇವರಿಗೆ ಲಭಿಸಿರುತ್ತದೆ.

ಮಂಗಳೂರು ಲಯನ್ಸ್ ಕ್ಲಬ್ ಅಶೋಕನಗರ ಇದರ ಸದಸ್ಯರಾಗಿ, ೨೦೦೫-೨೦೦೬ರಲ್ಲಿ ಅಧ್ಯಕ್ಷರಾಗಿ, ಜಿಲ್ಲಾ ಮಟ್ಟದಲ್ಲಿ ಉತ್ತಮ ಅಧ್ಯಕ್ಷ ಪುರಸ್ಕಾರ ಕೂಡ ಲಭಿಸಿರುತ್ತದೆ. 2006-2007 ರಲ್ಲಿ ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರಾಗಿ ಉತ್ತಮ ವಲಯ ಅಧ್ಯಕ್ಷ ಎಂದು ಜಿಲ್ಲಾ ಗವರ್ನರಿಂದ ಪುರಸ್ಕೃತಗೊಂಡಿರುವರು.

ಕೆನರಾ ಹೈ. ಪ್ರೈ.ಸ್ಕೂಲು ಇದರ ಪಿ.ಟಿ.ಎ ಸದಸ್ಯರಾಗಿ 2009 ರಲ್ಲಿ ಪಿ.ಟಿ.ಎ. ಅಧ್ಯಕ್ಷರಾಗಿ ಅಲ್ಲದೆ 2012 ರಲ್ಲಿ ಕೆನರಾ ಹೈಸ್ಕೂಲು ಸಿಬಿಎಸ್‌ಸಿ ಡೊಂಗರಕೇರಿ ಇಲ್ಲಿಯೂ ಪಿ.ಟಿ.ಎ. ಸದಸ್ಯರಾಗಿರುತ್ತಾರೆ.

ಪತ್ನಿ ದಯ ಜೆ. ಕಾರಂದೂರು ದ.ಕ.ಜಿ.ಪ.ಹೈ.ಪ್ರೈ. ಸ್ಕೂಲ್ ಸುರಿಬೈಲ್ ಇಲ್ಲಿ ಶಿಕ್ಷಕಿ. ಇಬ್ಬರು ಮಕ್ಕಳು. ಶಿವಾನಿ ಕಾರಂದೂರು ಹಾಗೂ ಬೇಬಿ ಸಲೋನಿ ಕಾರಂದೂರು.

ಯುವವಾಹಿನಿಯಲ್ಲಿ ಪ್ರಥಮ ಕಾರ್ಯಕ್ರಮಗಳಾದ ಸ್ವಾತಂತ್ರ್ಯ ದಿನಾಚರಣೆ, ಯುಗಾದಿ, ಗಾಂಧಿಜಯಂತಿ, ನಾರಾಯಣಗುರು ಜನ್ಮದಿನಾಚರಣೆ, ಮಕ್ಕಳ ಫೋಟೋ ಸ್ಪರ್ಧೆ, ಹಳೆ ಬೇರು ಹೊಸ ಚಿಗುರು ಮೊದಲಾದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಘಟಕದ ಬೆಳವಣಿಗೆಗೆ ಸಹಕರಿಸಿರುವರು.

ಇವರು ೨೦೦೯-೧೦ ಸಾಲಿನಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ 30-8-2009 ರಂದು ಯುವವಾಹಿನಿ ಕೇಂದ್ರ ಸಮಿತಿಯ ಹಾಗೂ ಘಟಕದ ಪದಾಧಿಕಾರಿಗಳಿಗೆ ಸಭಾ ನಡಾವಳಿ ತರಬೇತಿ ಕಾರ್ಯಕ್ರಮ ನಡೆದಿರುತ್ತದೆ.

6-12-2006 ರಂದು ಬಿಲ್ಲವ ವಿದ್ಯಾರ್ಥಿಗಳಿಗೆ ಭವಿಷ್ಯ ನಿರ್ಮಾಣ ಶೈಕ್ಷಣಿಕ ಕಾರ್ಯಗಾರ ಬೆಳ್ತಂಗಡಿ ಆಶಾ ಸಾಲ್ಯಾನ್ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.

ಕೇಂದ್ರ ಸಮಿತಿಯ ವತಿಯಿಂದ 3 ಮಂದಿಗೆ ರೂ. 3500/-ವೈದ್ಯಕೀಯ ನೆರವು ನೀಡಲಾಗಿತ್ತು.

ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಉಬರ್‍ದ ತುಡಾರ್ ಉಪ್ಪಿನಂಗಡಿ ಘಟಕದ ಅತಿಥ್ಯದಲ್ಲಿ ನಡೆಸಲಾಯಿತು.

ಕೇಂದ್ರ ಸಮಿತಿಯ ಸಂಪರ್ಕದ ನೆಲೆಯಲ್ಲಿ ಬಿಲ್ಲವ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಬಿಲ್ಲವ ಸಮಾಜಕ್ಕೊಂದು ಕಾಯಕಲ್ಪ ಎಂಬ ಚಿಂತನ ಸಮಾವೇಶ ತಾ. 9-5-2012 ರಂದು ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ನಡೆದಿರುತ್ತದೆ.

2009-10 ರ ಅವಧಿಯಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾನಿಧಿಯಿಂದ 59 ವಿದ್ಯಾರ್ಥಿಗಳಿಗೆ, ರೂ. 1,50,000/- ವಿದ್ಯಾರ್ಥಿ ವೇತನ ನೀಡಲಾಗಿತ್ತು.

23 ನೇ ಅಧ್ಯಕ್ಷರಾದ ಇವರು 23 ನೇ ವಾರ್ಷಿಕ ಸಮಾವೇಶ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ 2010. ತಾ. 8-8-2010 ರವಿವಾರದಂದು ಪಣಂಬೂರು ಘಟಕದ ಆತಿಥ್ಯದಲ್ಲಿ ಜವಹರಲಾಲ್ ನೆಹರು ಶತಮಾನೋತ್ಸವ ಸಭಾಂಗಣದಲ್ಲಿ ಪಣಂಬೂರಿನಲ್ಲಿ ಜರಗಿತು.

ವಿಳಾಸ: ದಯಜಯ, ನಿಶಾವಿಶ್ವ ಅವೆನ್ಯೂ, ಕೊಟ್ಟಾರ, ಮಂಗಳೂರು-575006
Cell : +91 9449106503, 2220673

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!