Yuvavahini

JAN 05, 2026 5.41 PM IST

ಯುವಸಿಂಚನ–ಜಾಲತಾಣ: ಒಂದು ವರ್ಷದ ಸೃಜನಶೀಲ ಸಾಗಣೆಗೆ ಮುನ್ನೋಟ

ಪದಗಳ ಪಯಣಕ್ಕೆ ದಿಕ್ಕು ತೋರಿದ ಮೊದಲ ಹೆಜ್ಜೆ

ಮಂಗಳೂರು: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಯುವಸಿಂಚನ ಹಾಗೂ ಸಾಮಾಜಿಕ ಜಾಲತಾಣ ಸಂಪಾದಕ ಮಂಡಳಿಯ 2025–26ನೇ ಸಾಲಿನ ಪ್ರಥಮ ಸಭೆಯು 2026ರ ಜನವರಿ 5ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು. ಒಂದು ವರ್ಷದ ಪತ್ರಿಕಾ ಹಾಗೂ ಜಾಲತಾಣ ಕಾರ್ಯಚಟುವಟಿಕೆಗಳು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಚಿಂತನೆ, ಚರ್ಚೆ ಮತ್ತು ನಿರ್ಧಾರಗಳೊಂದಿಗೆ ಸಭೆ ಅರ್ಥಪೂರ್ಣವಾಗಿ ಜರುಗಿತು.

35 ಘಟಕಗಳನ್ನು ಹೊಂದಿರುವ ಯುವವಾಹಿನಿ ಸಂಸ್ಥೆಯ ಪ್ರತಿಯೊಂದು ಘಟಕದ ಚಟುವಟಿಕೆಗಳಿಗೂ ಸಮಾನ ಪ್ರಚಾರ ದೊರಕಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ ಕೇಂದ್ರ ಸಮಿತಿಯ ಅಧ್ಯಕ್ಷ ಹಾಗೂ ಗೌರವ ಸಂಪಾದಕ ಅಶೋಕ್ ಕುಮಾರ್ ಪಡ್ಪು, ನವಿಲಿನ ನಾಟ್ಯದಂತೆ ದೊಡ್ಡ ವೇದಿಕೆಗಳಿಗೂ, ಪ್ರತಿ ಘಟಕದ ಶ್ರಮ ಮತ್ತು ಸಾಧನೆಗಳಿಗೂ ಸಮಾನ ಮಹತ್ವ ನೀಡಬೇಕು. ಸಮಾನತೆಯೇ ಸಂಘಟನೆಯ ಸೌಂದರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಶೋಕ್ ಕುಮಾರ್ ಪಡ್ಪು ಗೌರವ ಸಂಪಾದಕರು
ಅಶೋಕ್ ಕುಮಾರ್ ಪಡ್ಪು, ಗೌರವ ಸಂಪಾದಕರು

ಘಟಕಗಳಿಂದ ಯುವಸಿಂಚನ ಪತ್ರಿಕೆ ಹಾಗೂ ಜಾಲತಾಣಕ್ಕೆ ಬರುವ ವರದಿಗಳು ಕೇವಲ ಮಾಹಿತಿ ನೀಡುವಂತಲ್ಲ, ಓದುಗರನ್ನು ಸೆಳೆಯುವಂತೆ ಜೀವಂತವಾಗಿರಬೇಕು. ಸಂಪಾದಕ ಮಂಡಳಿಯ ಪ್ರತಿಯೊಬ್ಬ ಸದಸ್ಯರೂ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಾಗಲೇ ಈ ವರ್ಷದ ಸಂಪಾದಕ ಮಂಡಳಿ ಮಾದರಿಯಾಗುತ್ತದೆ ಎಂದು ಸಾಮಾಜಿಕ ಜಾಲತಾಣ ಸಂಪಾದಕ ರಾಜೇಶ್ ಸುವರ್ಣ ಮನವಿ ಮಾಡಿದರು.

ಹರೀಶ್ ಪಚ್ಚನಾಡಿ ಕಾರ್ಯನಿರ್ವಾಹಕ ಸಂಪಾದಕರು ಯುವಸಿಂಚನ
ಹರೀಶ್ ಪಚ್ಚನಾಡಿ, ಕಾರ್ಯನಿರ್ವಾಹಕ ಸಂಪಾದಕರು ಯುವಸಿಂಚನ

ಸಭೆಯಲ್ಲಿ, ವೈಚಾರಿಕ ಲೇಖನಗಳೊಂದಿಗೆ ಯುವಸಿಂಚನ ಪತ್ರಿಕೆಗೆ ಹೊಸತನದ ಸ್ಪರ್ಶ ನೀಡುವುದು, ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಘಟಕಗಳ ಕಾರ್ಯಚಟುವಟಿಕೆಗಳ ವರದಿಗಳು ಕ್ಷಿಪ್ರವಾಗಿ ಪ್ರಕಟವಾಗುವಂತೆ ವ್ಯವಸ್ಥೆ ರೂಪಿಸುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.

ಚೈತ್ರಾ ಕಬ್ಬಿನಾಲೆ, ಪತ್ರಿಕಾ ಕಾರ್ಯದರ್ಶಿ, ಯುವಸಿಂಚನ
ಚೈತ್ರಾ ಕಬ್ಬಿನಾಲೆ, ಪತ್ರಿಕಾ ಕಾರ್ಯದರ್ಶಿ, ಯುವಸಿಂಚನ
ಲತೀಶ್ ಸಂಕೊಳಿಗೆ, ಸದಸ್ಯರು, ಯುವಸಿಂಚನ ಸಂಪಾದಕ  ಮಂಡಳಿ
ಲತೀಶ್ ಸಂಕೊಳಿಗೆ, ಸದಸ್ಯರು, ಯುವಸಿಂಚನ ಸಂಪಾದಕ ಮಂಡಳಿ

ಈ ಸಭೆಯಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾಲತಾ, ಕೋಶಾಧಿಕಾರಿ ಸತೀಶ್ ಕಿಲ್ಪಾಡಿ ಹಾಗೂ ಯುವಸಿಂಚನ ಮತ್ತು ಸಾಮಾಜಿಕ ಜಾಲತಾಣ ಸಂಪಾದಕ ಮಂಡಳಿಯ ಸದಸ್ಯರಾದ ಭವಾನಿ ಕೆ ಮತ್ತು ಲತೀಶ್ ಎಂ ಸಂಕೋಳಿಗೆ ಉಪಸ್ಥಿತರಿದ್ದರು.

ರಾಜೇಶ್ ಸುವರ್ಣ ಸಂಪಾದಕರು ಸಾಮಾಜಿಕ ಜಾಲತಾಣ
ರಾಜೇಶ್ ಸುವರ್ಣ, ಸಂಪಾದಕರು ಸಾಮಾಜಿಕ ಜಾಲತಾಣ

ಯುವಸಿಂಚನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಹರೀಶ್ ವಿ. ಪಚ್ಚನಾಡಿ ಸ್ವಾಗತಿಸಿ, ಸಂಪಾದಕ ಮಂಡಳಿಯ ಸದಸ್ಯೆ ಉಷಾ ಕೆ ಧನ್ಯವಾದ ಸಲ್ಲಿಸಿದರು.

ಶಿವಪ್ರಸಾದ್, ಸದಸ್ಯರು ಸಂಪಾದಕ ಮಂಡಳಿ
ಶಿವಪ್ರಸಾದ್, ಸದಸ್ಯರು ಸಂಪಾದಕ ಮಂಡಳಿ
ಭವಾನಿ ಕೆ, ಸದಸ್ಯರು ಸಂಪಾದಕ ಮಂಡಳಿ
ಉಷಾ ಕೆ, ಸದಸ್ಯರು ಸಂಪಾದಕ ಮಂಡಳಿ
ಆದರ್ಶ್ ಸುವರ್ಣ, ಸದಸ್ಯರು, ಸಂಪಾದಕ ಮಂಡಲಿ
ಆದರ್ಶ್ ಸುವರ್ಣ, ಸದಸ್ಯರು, ಸಂಪಾದಕ ಮಂಡಲಿ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!