ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ದಿನಾಂಕ 2-9-1971 ರಲ್ಲಿ ಜನಿಸಿದ ಜಿತೇಂದ್ರ ಜೆ.ಸುವರ್ಣರವರು ಬಿ.ಕಾಂ. ಪದವೀದರರಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವರು. ಯುವವಾಹಿನಿಯ 2004-05 ರ ಸಾಲಿನ ಅಧ್ಯಕ್ಷರಾಗಿ ಎಲ್ಲಾ ಘಟಕದೊಂದಿಗೆ ನಿಕಟ ಸಂಪರ್ಕವಿರಿಸಿ ಘಟಕಗಳು ಉತ್ತಮ ಕಾರ್ಯಕ್ರಮವನ್ನು ನಡೆಸಿಕೊಳ್ಳುವಲ್ಲಿ ಸಹಕರಿಸಿ ಸಂಸ್ಥೆಯನ್ನು ಮುನ್ನಡೆಸಿದವರು. ಉದ್ಯಮಿಯಾಗಿರುವ ಇವರು ಕೊಡುಗೈದಾನಿಯಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿರುವ ಅನುಭವ ಹೊಂದಿದವರಾಗಿರುತ್ತಾರೆ. ಬಂಟ್ವಾಳ ತಾಲೂಕು ಯುವಜನ ಒಕ್ಕೂಟದ ಮಾಜಿ ಉಪಾಧ್ಯಕ್ಷರಾಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಗ್ರಾಮ ಮಟ್ಟ, ಮಂಡಳಿ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಪದಾಧಿಕಾರಿಗಳಾಗಿ ಬಂಟ್ವಾಳ ಬಿಲ್ಲವ ಸಂಘದ ಕಾರ್‍ಯಕಾರಿ ಸಮಿತಿ ಸದಸ್ಯರಾಗಿ ಕೆಲಸ ಮಾಡಿರುವ ಇವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಮರಳು ದೋಣಿ ಮಾಲಕರ ಮತ್ತು ಕಾರ್ಮಿಕರ ಸಂಘ(ರಿ), ಮಂಗಳೂರು ಇದರ ಅಧ್ಯಕ್ಷರಾಗಿ ಕರ್ನಾಟಕ ಕರಾವಳಿ ಮರಳು ಗುತ್ತಿಗೆದಾರರು ಹಾಗೂ ಕಾರ್ಮಿಕರ ಹಿತರಕ್ಷಣಾ ಸಮಿತಿ ಇದರ ಉಪಾಧ್ಯಕ್ಷರಾಗಿ ದುಡಿಯುತ್ತಿದ್ದಾರೆ.
ಇವರು ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಬಂಟ್ವಾಳ ತಾಲೂಕಿನಾದ್ಯಂತ ಉಚಿತ ನೇತೃ ತಪಾಸನಾ ಶಿಬಿರ, ಬೈದ್ಯಶ್ರೀ ಕ್ರೀಡೋತ್ಸವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಶಿಬಿರ, ರಕ್ತದಾನ ಶಿಬಿರ, ಸದಸ್ಯರಿಗೆ ವ್ಯಕ್ತಿತ್ವ ವಿಕಸನ ಶಿಬಿರ ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡಿ ಘಟಕವನ್ನು ಬಲಿಷ್ಠಗೊಳಿಸಿ ಕೆಲಸ ಮಾಡಿದ ಅನುಭವ ಇರುವ ಇವರು ಕೇಂದ್ರ ಸಮಿತಿಯಲ್ಲಿ ವಿವಿಧ ಹುದ್ದೆಯನ್ನು ಅಲಂಕರಿಸಿ ಬಳಿಕ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಸಮರ್ಥವಾಗಿ ನಿರ್ವಹಿಸಿರುತ್ತಾರೆ.
ಶ್ರೀ ವಿಜಯಲಕ್ಷ್ಮಿ ಯುವಕ ಮಂಡಲ(ರಿ), ನರಿಕೊಂಬು ಇದರ 2 ಬಾರಿ ಅಧ್ಯಕ್ಷರಾಗಿದ್ದ ಇವರು ರಾಷ್ಟ್ರಮಟ್ಟದ ಹೊನಲು ಬೆಳಕಿನ ವಿಜಯಲಕ್ಷ್ಮಿ ಕ್ರೀಡೋತ್ಸವವನ್ನು ಬಹಳ ಅದ್ದೂರಿಯಾಗಿ ನಡೆಸಿ ಸರ್ವಧರ್ಮ ಸಮ್ಮೇಳನ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮಾಡಿ ಖ್ಯಾತಿಯನ್ನು ಹೊಂದಿರುತ್ತಾರೆ.
ವಿಳಾಸ: ಶ್ರೀ ಗುರುಜ್ಯೋತಿ, ಮಂಗಳಾದೇವಿ ದೇವಸ್ಥಾನ ರಸ್ತೆ, ಮಂಗಳೂರು – 575 001
ಮೊಬೈಲ್: 9739029579