ದಿನಾಂಕ 23/ 11/2025 ರವಿವಾರ ಸ್ಥಳ ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅರ್ಚಕರು ಶ್ರೀ ಚಂದ್ರಶೇಖರ್ ಶಾಂತಿ ಇವರ ಸಮ್ಮುಖದಲ್ಲಿ ಬೆಳಿಗ್ಗೆ ಆರಂಭವಾದ ಸತ್ಯನಾರಾಯಣ ಪೂಜೆಯು ಮಧ್ಯಾಹ್ನ ಮಹಾ ಮಂಗಳಾರತಿ ನೆರವೇರಿತು .
ತದನಂತರ ಸೇರಿರುವಂತಹ ಸರ್ವ ಭಕ್ತರಿಗೆ ಶ್ರೀ ದೇವರ ಗಂಧ ಪ್ರಸಾದ ಹಾಗೂ ಪೂಜಾ ಪ್ರಸಾದವನ್ನು ವಿತರಿಸಲಾಯಿತು.
ಘಟಕದ ಅಧ್ಯಕ್ಷರಾದ ಶ್ರೀ ವರುಣ್ ಕುಮಾರ್ ದಂಪತಿ ಸಹಿತವಾಗಿ ನೇತೃತ್ವ ವಹಿಸಿದ್ದರು. ಪೂಜೆ ,ಅದೇ ರೀತಿ ಘಟಕದ ಮಾಜಿ ಅಧ್ಯಕ್ಷರು ಗೌರವ ಸಲಹೆಗಾರರು ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಸದಸ್ಯರು ಹಾಗೂ ಗ್ರಾಮಸ್ಥರು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು .
ಪ್ರಸಾದ ವಿತರಣೆಯ ಬಳಿಕ ಶ್ರೀ ದೇವರ ಪ್ರಸಾದವಾಗಿ ಸೇರಿರುವಂತಹ ಎಲ್ಲಾ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
DEC 12, 2025 7.33 AM IST


