ದಿನಾಂಕ 04-09-2025ರಂದು ನಾರಾಯಣ ಗುರು ವಿದ್ಯಾ ಸಂಸ್ಥೆ ಸಹಕಾರದೊಂದಿಗೆ ಶಿಕ್ಷಕರ ದಿನಾಚರಣೆ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ವಿನಯ್ ಕುಮಾರ್ ಮಟ್ಟು ವಹಿಸಿದ್ದರು.
ಶಾಲಾ ಸಂಚಾಲಕರಾದ ಹರೀoದ್ರ ಸುವರ್ಣ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಳವೆಯಲ್ಲಿ ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ ಸಂಸ್ಕಾರಯುತರನ್ನಾಗಿ ಮಾಡುವ ಕಾರ್ಯ ಅಭಿನಂದನೀಯ ಎಂದರು.
ಮುಖ್ಯ ಅತಿಥಿಗಳಾಗಿ ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರು ಲೋಕೇಶ್ ಕೋಟ್ಯಾನ್, ಶಾಲಾ ಕಾರ್ಯದರ್ಶಿ, ಬಾಲಚಂದ್ರ ಸನಿಲ್, ಮಂಜುಳ ಕೆ. ವಿ., ಯತೀಶ್ ಅಮೀನ್, ಗೀತ ಶೆಟ್ಟಿ ಹಾಗೂ ಯೋಗೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಶಿಕ್ಷಕಿಯರಾದ ಶೈಲಾಶ್ರೀ ಮತ್ತು ಸುನಿತಾ ರವರನ್ನು ಸನ್ಮಾನಿಸಲಾಯಿತು ಹಾಗೂ ಶಿಕ್ಷಕ ಮತ್ತು ಶಿಕ್ಷಕಿಯರನ್ನು ಗೌರವಿಸಲಾಯಿತು. ವಿದ್ಯಾರ್ಥಿನಿ ಶ್ರಾವ್ಯ ನಿರ್ವಹಿಸಿದರು ಶಿಕ್ಷಕಿ ಅನುಷಾ ಧನ್ಯವಾದ ಅರ್ಪಿಸಿದರು.


