ಕತ್ತಲೆಯನ್ನು ಹೋಗಲಾಡಿಸುವ ದೀಪಾವಳಿ ಪರ್ವ ಕಾಲದಲ್ಲಿ ಯುವ ಜನತೆ ಹಿಂದಿನ ಕಾಲದ ಸಂಸ್ಕಾರ ಹಾಗೂ ಸಂಸ್ಕೃತಿ ಯನ್ನು ಜೀವನದಲ್ಲಿ ಅಳವಡಿಸಿ ಕೊಂಡು ಜೀವನ ಸಾಗಿಸಬೇಕು ಎಂದು ಯುವವಾಹಿನಿ ಕೇಂದ್ರ ಸಮಿತಿ ಯ ಗೌರವ ಸಲಹೆಗಾರರಾದ ಶ್ರೀ ಎನ್ ಟಿ ಅಂಚನ್ ಹೇಳಿದರು.
ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಘಟಕದ 23 ನೇ ವರ್ಷದ ತುಳುವೆರೆ ತುಡರ ಪರ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಉಡುಪಿಯ ನ್ಯಾಯವಾದಿ ಹಮ್ಜತ್ ರವರು ಮಾತನಾಡಿ ನಮ್ಮ ಹಿರಿಯರ ಆಚಾರ ವಿಚಾರ ಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ಜವಾಬ್ದಾರಿ ನಮ್ಮದು, ನಮ್ಮ ಧರ್ಮವನ್ನು ಪ್ರೀತಿಸುವಂತೆ ಅನ್ಯ ಧರ್ಮವನ್ನು ಗೌರವಿಸುವ ಜೊತೆಗೆ ಸಾಮರಸ್ಯದ ಜೀವನ ನಡೆಸುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಮುಲ್ಕಿ ಸೀಮೆಯ ಯ ನಾಯ್ಕ ಪಟ್ಟದ ಗಡಿ ಪ್ರಧಾನ ರಾದ ಮಾಗಂದಡಿ ಗೋಪಾಲ್ ನಾಯಕರನ್ನು ಪರ್ಬದ ತಮ್ಮನ ನೀಡಿ ಗೌರವಿಸಲಾಯಿತು
ಮುಖ್ಯ ಅಥಿತಿಗಳಾಗಿ ಜೊತಿಷಿ ,ಅರ್ಚಕ ಕೆ.ಪಿ ಜಗದೀಶ್ ಉಪಾಧ್ಯಾಯ, ಪ್ರಾಂಶುಪಾಲೆ ಗ್ರೆಟ್ಟಾ ಮೊರೊಸ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್, ಘಟಕಾಧ್ಯಕ್ಷ ವಿನಯ ಕುಮಾರ್ ಮಟ್ಟು, ಘಟಕದ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ್ ಸುವರ್ಣ, ಕಾರ್ಯಕ್ರಮ ನಿರ್ದೇಶಕರಾದ ಶ್ರೀಮತಿ ಶಕೀಲಾ ಹರಿಂದ್ರಾ ಸುವರ್ಣ, ಸತೀಶ್ ಸಾಲ್ಯಾನ್ ಚಿತ್ರಾಪು, ಕಾರ್ಯದರ್ಶಿ ಪ್ರೇರಣಾ ಡಿ. ಉಪಸ್ಥಿತರಿದ್ದರು.
ಆಯ್ದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಗೂಡುದೀಪ, ರಂಗೋಲಿ ಸ್ಪರ್ಧೆಯು ವಿಜೇತರಿಗೆ ಬಹುಮಾನ , ಎಲ್ಲಾ ಸ್ಪರ್ಧಿಗಳಿಗೂ ಗೌರವ, ಗೋಪೂಜೆ, ಬಲೀಂದ್ರ ಪೂಜೆ, ವಿಶೇಷತೆಯಾಗಿತ್ತು.
. ವಿನಯ್ ಕುಮಾರ್ ಸ್ವಾಗತಿಸಿದರು, ಮೇಘನಾ ಯಶಸ್ವಿನಿ ಪ್ರಾರ್ಥಿಸಿದರು, ಮಾಜಿ ಅಧ್ಯಕ್ಷ ರಾಮಚಂದ್ರ ಕೋಟ್ಯಾನ್ ಪ್ರಸ್ತಾವಿಸಿದರು, ಕವನ್ ಕುಬೆವೂರು ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಪ್ರೇರಣಾ ಡಿ ವಂದಿಸಿದರು. ಮಾಜಿ ಅಧ್ಯಕ್ಷ ಜಯ ಕುಮಾರ್ ಕುಬೆವೂರು ನಿರೂಪಿಸಿದರು.


