Yuvavahini

DEC 01, 2025 2.55 PM IST

ಕೋಟಿ ಚೆನ್ನಯ್ಯ ಟ್ರೋಫಿ-2025 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್-ಯುವವಾಹಿನಿ (ರಿ.) ಬೆಂಗಳೂರು ಘಟಕ

ಕೋಟಿ ಚೆನ್ನಯ್ಯ ಟ್ರೋಫಿ-2025″ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್
ಭಾನುವಾರ, ಅಕ್ಟೋಬರ್ 12 ರಂದು ನಾಡಪ್ರಭು ಕೆಂಪೇಗೌಡ ಬ್ಯಾಡ್ಮಿಂಟನ್ ಕೋರ್ಟ್, ವಿಜಯನಗರ ದಲ್ಲಿ ನಡೆಯಿತು.

ಪುರುಷರ ಸಿಂಗಲ್ಸ್, ಡಬಲ್ಸ್, ಮಹಿಳೆಯರ ಡಬಲ್ಸ್ , ಮಿಕ್ಸಡ್ ಡಬಲ್ಸ್ ಪಂದ್ಯಗಳು* ನಡೆದವು.

ಮಧ್ಯಾಹ್ನ 3 ಗಂಟೆಯಿಂದ ಮಾಸಿಕ ಸಭೆ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಿತು.

ಬ್ಯಾಡ್ಮಿಂಟನ್ ಕೋರ್ಟ್, ರೆಫರಿಗಳು, ಜಡ್ಜ್ ಹಾಗೂ ಇತರೆ ಸ್ಥಳೀಯ ವ್ಯವಸ್ಥೆಗಳನ್ನು ಕ್ರೀಡಾ ನಿರ್ದೇಶಕರು ಕಿಶನ್ ಪೂಜಾರಿ ಮತ್ತು ರಕ್ಷಾ ಪ್ರಾಯೋಜಿಸಿದ್ದರು.

ಸುಂದರ ಟ್ರೋಫಿಗಳು ಮತ್ತು ಬಹುಮಾನಗಳನ್ನು ಯಜ್ನೇಶ್ ಪೂಜಾರಿ, ದುಬೈ — (ಸುಧೀರ್ ಪೂಜಾರಿ ಪೆರಾಡಿ ಅವರ ರೆಫೆರೆನ್ಸ್ ಮೂಲಕ) ಹಾಗೂ ಘಟಕದ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಸಚ್ಚಿಂದ್ರ ಕೋಟ್ಯಾನ್ ರವರು ಪ್ರಾಯೋಜಿಸಿದ್ದರು.

ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಘಟಕದ ಸದಸ್ಯರ ಉಪಸ್ಥಿತಿ ಪಂದ್ಯಾಟಕ್ಕೆ ಮೆರಗು ನೀಡಿತು. ನುರಿತ ಆಟಗಾರರು ಒಂದು ಕಡೆಯಿಂದ ಕಣಕ್ಕಿಳಿದರೆ ಇನ್ನೊಂದು ಕಡೆಯಿಂದ ಕ್ರೀಡಾ ಸ್ಪೂರ್ತಿಯೊಂದಿಗೆ ನಮ್ಮ ಕೆಲವು ಹೊಸ ಆಟಗಾರರ ಭಾಗವಹಿಸುವಿಕೆ ಕ್ರೀಡೆಯ ಮಹತ್ವವನ್ನು ಹೆಚ್ಚಿಸಿತು.
ಭಾಗವಹಿಸಿದ ಎಲ್ಲಾ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಆಡಿ ಗಮನ ಸೆಳೆದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಲೆಂಜರ್ಸ್ ತಂಡದ ವಿನೋದ್ ರಾಜ್ ಚಾಂಪಿಯನ್ ಆದರೆ ತುಡರ್ ತಂಡದ ಕಿಶನ್ ಎರಡನೇ ಸ್ಥಾನವನ್ನು ಅಲಂಕರಿಸಿದರು.

ಪುರುಷರ ಡಬಲ್ಸ್ ವಿಭಾಗದಲ್ಲಿ ತುಡರ್ ತಂಡದ ಗಣೇಶ್ ಹಾಗೂ ಕಿಶನ್ ಜೋಡಿ ಚಾಂಪಿಯನ್ ಆದರೆ ಚಾಲೆಂಜರ್ಸ್ ತಂಡದ ವಿನೋದ್ ರಾಜ್ ಹಾಗೂ ಸುರೇಂದ್ರ ಜೋಡಿ ಎರಡನೇ ಸ್ಥಾನ ಪಡೆದರು.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತುಡರ್ ತಂಡದ ಶ್ರಾವ್ಯ ಮತ್ತು ಅಮಿತ ಜೋಡಿ ಚಾಂಪಿಯನ್ ಆದರೆ ಪವರ್ ತಂಡದ ದೀಕ್ಷಾ ಹಾಗೂ ವೈಶು ಜೋಡಿ ಎರಡನೇ ಸ್ಥಾನ ಪಡೆದರು.

ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ತುಡರ್ ತಂಡದ ಕಿಶನ್ ಮತ್ತು ಶ್ರಾವ್ಯ ಜೋಡಿ ಚಾಂಪಿಯನ್ ಆದರೆ ಬಿರುವೆರ್ ತಂಡದ ಅನುಷಾ ಹಾಗೂ ರೋಹಿತ್ ಎರಡನೇ ಸ್ಥಾನ ಪಡೆದರು.

ತುಡರ್ ತಂಡದ ಎಲ್ಲಾ ಆಟಗಾರರ ಕಮಿಟ್ಮೆಂಟ್ ಎಲ್ಲಾ ವಿಭಾಗದಲ್ಲಿ ಬಹುಮಾನ ಪಡೆಯುವಲ್ಲಿ ಯಶಸ್ವಿಯಾಗಿ ಬಲಿಷ್ಠ ತಂಡವಾಗಿ ಹೊರ ಹೊಮ್ಮಿತು.

ಭಾಗವಹಿಸಿದ ಎಲ್ಲಾ ಆಟಗಾರರು ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡುತ್ತಾ ಆಟವಾಡಿ ಯುವವಾಹಿನಿ ಯನ್ನು ಗೆಲ್ಲಿಸಿದರು.

ಈ ಪಂದ್ಯಕೂಟದ ಮಧ್ಯೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಯುವವವೈಭವ 2025 ಪೂರ್ವಭಾವಿ ಸಭೆ ನಡೆಸಿ ರೂಪುರೇಷೆ ಬಗ್ಗೆ ವಿವರಣೆ ನೀಡಿದರು.

ಪಂದ್ಯಕೂಟದ ನಂತರ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪಣಪಿಲ , ಮಾಜಿ ಅಧ್ಯಕ್ಷರುಗಳು ಹಾಗೂ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಬೆಂಗಳೂರು ಘಟಕದ ಅಧ್ಯಕ್ಷ ಲೊಕೇಶ್ ಹಾಗೂ ಸದಸ್ಯೆ ದೀಪಾ ಇವರ ಸಮಾಗಮದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!