ಘಟಕದಲ್ಲಿ ಹೊಸದಾಗಿ ಸದಸ್ಯರಾಗಿ ಸೇರ್ಪಡೆ ಗೊಂಡ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮವು ದಿನಾಂಕ 20.07.2025ರ ಆದಿತ್ಯವಾರ ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ ನಲ್ಲಿ ನಡೆಯಿತು.
ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಜಯಾನಂದ ಕಲ್ಲಾಪು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು. ಕೇಂದ್ರ ಸಮಿತಿಯ ಮಾಜಿ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀ ಅಜಿತ್ ಕುಮಾರ್ ಪಾಲೇರಿ ನೂತನ ಸದಸ್ಯರಿಗೆ ಯುವವಾಹಿನಿ ಸಂಘಟನೆಯ ಧ್ಯೇಯಗಳು,ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಗೌರವ ಸಲಹೆಗಾರರು ಶ್ರೀ ವರದರಾಜ್ ಎಂ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷರಾದ ಶ್ರೀ ನಾಣ್ಯಪ್ಪ ಕೋಟ್ಯಾನ್ ರವರು ಎಲ್ಲರನ್ನೂ ಸ್ವಾಗತಿಸಿ,ಈ ವರ್ಷ ಹೆಚ್ಚು ಮಂದಿ ಸದಸ್ಯರು ಸೇರ್ಪಡೆ ಗೊಂಡಿರುವುದು ಮತ್ತು ಅತೀ ಹೆಚ್ಚು ಅಜೀವ ಸದಸ್ಯರುಗಳ ನೋಂದಣಿ ಆಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸೋಮಸುಂದರ್ ಕೊಡಿಪ್ಪಾನ ಧನ್ಯವಾದ ಸಮರ್ಪಿಸಿದರು.
ಪದಾಧಿಕಾರಿ ಶ್ರೀ ರಾಜೀವ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.


