ಇತ್ತೀಚಿಗೆ ನಮ್ಮನ್ನಗಲಿದ ಘಟಕದ ಸಲಹೆಗಾರರಾದ ಉಮನಾಥ ಕೋಟ್ಯಾನ್ ಬೆಳಾಲು ಇವರಿಗೆ ನುಡಿನಮನ ಕಾರ್ಯಕ್ರಮವನ್ನು ದಿನಾಂಕ 18.09.2025 ಗುರುವಾರದಂದು ಘಟಕದ ವತಿಯಿಂದ ನಡೆಸಿ ಅವರಿಗೆ ಗೌರವ ಸಲ್ಲಿಸಲಾಯಿತು. ಘಟಕದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳರವರು ಉಮಾನಾಥ್ ಕೋಟ್ಯಾನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರೊಂದಿಗಿನ ಒಡನಾಟದ ಬಗ್ಗೆ ಹಾಗೂ ಸಂಘಟನೆಯ ಯಶಸ್ಸಿನ ಹಿಂದೆ ಇದ್ದ ಅವರ ಕೊಡುಗೆಯನ್ನು ಸ್ಮರಿಸಿದರು ಘಟಕದ ಸ್ಥಾಪಕಧ್ಯಕ್ಷರಾದ ರಾಕೇಶ್ ಕುಮಾರ್ ಮೂಡುಕೋಡಿ, ಮಾಜಿ ಅಧ್ಯಕ್ಷರಾದ ಎಂ ಕೆ ಪ್ರಸಾದ್, ಅಶ್ವಥ್ ಕುಮಾರ್, ಸದಾಶಿವ ಪೂಜಾರಿ ಊರ ಹಾಗೂ ಪ್ರಶಾಂತ್ ಮಚ್ಚಿನ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ಮಧುರ ರಾಘವ್, ಕೋಶಾಧಿಕಾರಿ ನಾಗೇಶ್ ಆದೆಲು, ಮಹಿಳಾ ಸಂಚಾಲನ ಸಮಿತಿ ಪ್ರಧಾನ ಸಂಚಾಲಕರಾದ ಶ್ರೀಮತಿ ಲೀಲಾವತಿ ಪನಕಜೆ ಹಾಗೂ ಘಟಕದ ನಿರ್ದೇಶಕರುಗಳು, ಪದಾಧಿಕಾರಿಗಳು ಸಂಘಟನಾ ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ, ಸದಸ್ಯರೆಲ್ಲರೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
OCT 22, 2025 2.41 PM IST


