5 ಮಹಿಳೆಯರ ಶಿಕ್ಷಾ ಸಾಥಿ ಎಂಬ ಸಂಘಟನೆ ಜಂಟಿಯಾಗಿ ದಿನಾಂಕ 22/09/2025 ರಂದು ಮಾಡೂರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಟಿವಿ ಯನ್ನು ಕೊಡುಗೆಯಾಗಿ ಹಸ್ತಾಂತರ ಮಾಡಲಾಯಿತು.
ವಿದ್ಯಾರ್ಥಿಗಳ ಕೊರತೆ ಎದುರಿಸಿ ಮುಚ್ಚುವ ಹಂತದಲ್ಲಿ ಇದ್ದ ಸರ್ಕಾರಿ ಶಾಲೆಗೆ ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಶ್ರೀ ಸುಜಿತ್ ಮಾಡೂರ್ ಅವರ ಮುತುವರ್ಜಿಯಿಂದ, ಊರವರ ಸಹಕಾರದಿಂದ ಖಾಸಗಿ ಶಾಲೆಗೆ ಸಮನಾಗಿ ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಎಲ್ಲಾ ಅವಶ್ಯಕತೆ ಪೂರೈಸುವ ನಿಟ್ಟಿನಲ್ಲಿ ಘಟಕ ಹಾಗೂ ಶಿಕ್ಷಾ ಸಾಥಿ ಎಂಬ ಸಮಾನ ಮನಸ್ಕರ 5 ಮಹಿಳೆಯರ ಸಂಘಟನೆಯ ಸಹಕಾರದಿಂದ ಸ್ಮಾರ್ಟ್ ಟಿವಿ ಯನ್ನು ಕೊಡುಗೆಯಾಗಿ ನೀಡಿತು. ಈ ಸಂದರ್ಭದಲ್ಲಿ ಘಟಕ ದ ಅಧ್ಯಕ್ಷರಾದ ಶ್ರೀ ನಿತಿನ್ ಕರ್ಕೇರ ಮಾತನಾಡಿ *ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಾಲೆ ಯಂತೆ ಎಲ್ಲಾ ಸೌಲಭ್ಯ ದೊರೆತರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ, ಸ್ಮಾರ್ಟ್ ಟಿವಿ ಯಿಂದ ಮಕ್ಕಳಿಗೆ ಬಹಳ ಬೇಗನೆ ಅರ್ಥವಾಗುವಂತೆ ಕಲಿಸಲು ಅನುಕೂಲ, ವಿದ್ಯಾರ್ಥಿಗಳ ಆಸಕ್ತಿಗೆ ಸ್ಮಾರ್ಟ್ ಟಿವಿ ಪೂರಕ, ಆದುದರಿಂದ ಶಿಕ್ಷಾ ಸಾಥಿ ಜೊತೆ ಕೈ ಜೋಡಿಸಿ ಶಾಲೆಗೆ ಟಿವಿ ನೀಡಲು ನಮಗೆ ಸಂತೋಷವಾಗಿದೆ ಎಂದರು. ಶಾಲೆಯ ಅಭಿವೃದ್ಧಿಯ ರೂವಾರಿ ಶ್ರೀ ಸುಜಿತ್ ಮಾಡೂರ್ ಘಟಕದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸಿ ಸಹಕಾರ ನೀಡಿದ ಯುವವಾಹಿನಿ ಘಟಕದ ಸರ್ವ ಸದಸ್ಯರಿಗೂ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಘಟಕದ ಸಂಘಟನಾ ನಿರ್ದೇಶಕರಾದ ಶ್ರೀ ರಘುರಾಮ್ ಸುವರ್ಣ, ಶ್ರೀ ಶೇಖರ್ ಮಾಡೂರ್, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀ ಶಶಿಧರ್ ಮಾಡೂರ್, ಸಮಾಜ ಸೇವೆ ನಿರ್ದೇಶಕರಾದ ಶ್ರೀ ಭಾಸ್ಕರ್ ಮಡ್ಯಾರ್ ಉಪಸ್ಥಿತರಿದ್ದರು. ಶಿಕ್ಷಾ ಸಾಥಿ ಸಂಸ್ಥೆಯ ಶ್ರೀಮತಿ ಸುಜಾತ ರಾಜೇಶ್ ಇವರು ಸ್ಮಾರ್ಟ್ ಟಿವಿ ನೀಡುವ ಸಹಬಾಗಿತ್ವಕ್ಕೆ ಯುವವಾಹಿನಿ ಘಟಕದ ಅಧ್ಯಕ್ಷರ ತುರ್ತು ಸ್ಪಂದನೆಗೆ, ಘಟಕದ ಸರ್ವರ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.


