ಶ್ರೀ ವನದುರ್ಗ ದೇವಸ್ಥಾನ ಕುಮಟಾ ಕೋನಳ್ಳಿಯಲ್ಲಿ ನಡೆಯುತ್ತಿರುವ ಶ್ರೀ ರಾಮಕ್ಷೇತ್ರದ ಪೀಠಾಧೀಶರಾದ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರ ಚಾತುರ್ಮಾಸ್ಯ ವೃತಾಚರಣೆಗೆ ಘಟಕದಿಂದ ದಿನಾಂಕ 07.08.2025ರ ಗುರುವಾರದಂದು ಭಾಗವಹಿಸಿ ಪೂಜ್ಯ ಸ್ವಾಮೀಜಿಗಳ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳು ಘಟಕದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ಇವರನ್ನು ಗೌರವಿಸಿದರು. ಚಾತುರ್ಮಾಸ್ಯ ವೃತಾಚಾರಣೆಗೆ ಘಟಕದ ಮಾಜಿ ಅಧ್ಯಕ್ಷರು, ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ಎಂ.ಕೆ.ಪ್ರಸಾದ್, ಘಟಕದ ಮಾಜಿ ಅಧ್ಯಕ್ಷರಾದ ಸದಾಶಿವ ಪೂಜಾರಿ ಊರ, ವೇಣೂರು ಘಟಕದ ಅಧ್ಯಕ್ಷರಾದ ಶುಭಕರ ಪೂಜಾರಿ ಸಾವ್ಯ, ಘಟಕದ ಸಲಹೆಗಾರರಾದ ಸಚಿನ್ ಕುಮಾರ್ ನೂಜೋಡಿ, ಶ್ರೀಧರ ಪೂಜಾರಿ, ರಮೇಶ್ ಬಂಗೇರ ಒಟ್ಲ, ಜಾರಪ್ಪ ಪೂಜಾರಿ ಬೆಳಾಲು, ಮಹಿಳಾ ಸಂಚಾಲನ ಸಮಿತಿ ಪ್ರ.ಸಂಚಾಲಕಿ ಲೀಲಾವತಿ ಪನಕಜೆ, ಕೋಶಾಧಿಕಾರಿ ಜಯಶ್ರೀ ಕಿಲ್ಲೂರು, ಘಟಕದ ನಿರ್ದೇಶಕರಾದ ಅಶೋಕ್ ಕಲ್ಮಂಜ, ಸುದೀಪ್ ಸಾಲಿಯಾನ್, ಜಿತೇಶ್ ಕುಮಾರ್, ರಾಘವೇಂದ್ರ ಮೇಲಂತಬೆಟ್ಟು, ಸಂಪತ್ ಗರ್ಡಾಡಿ ಹಾಗೂ ರಮ್ಯಾ ವಿ ಕೋಟ್ಯಾನ್ ಉಪಸ್ಥಿತರಿದ್ದರು.
SEP 19, 2025 8.47 AM IST


