ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅಧ್ಯಕ್ಷರಾದ ನೈನಾ ವಿಶ್ವನಾಥ್ ಎಲ್ಲರನ್ನು ಸ್ವಾಗತಿಸಿದರು. ಸ್ವಾತಂತ್ರ ದಿನಾಚರಣೆ ಪ್ರಯುಕ್ತ ದೇಶಭಕ್ತಿ ಗೀತೆಗಳ ಸ್ಪರ್ಧೆಯು ನಡೆಯಿತು. ಶ್ರೀಮತಿ ಧನ್ಯಲತ ರಮೇಶ್ ಅವರು ಸ್ವರ್ಧೆಯ ತೀರ್ಪುಗಾರರಾಗಿ ಫಲಿತಾಂಶ ನೀಡಿದರು.
ನಂತರ ರಾಷ್ಟ್ರ ಸೇವೆಗೆ ಲೆಫ್ಟಿನೆಂಟ್ ಆಗಿ ಆಯ್ಕೆಯಾದ ಶ್ರೀ ಸುದೀಪ್ ರಾಜ್ ಅವರನ್ನು ಸನ್ಮಾನಿಸಲಾಯಿತು.
ಅವರು ಕಾರ್ಗಿಲ್ ಯುದ್ದ ದ ತಮ್ಮ ಅನುಭವಗಳನ್ನು ಹಂಚಿಕೊಂಡರು.
ರಕ್ಷಾ ಬಂಧನ ಹಬ್ಬದ ಸಲುವಾಗಿ ಎಲ್ಲ ಸದಸ್ಯರು ಶ್ರೀಯುತ ಸುದೀಪ್ ರಾಜ್ ಅವರಿಗೆ ರಾಖಿಯನ್ನು ಕಟ್ಟಿ ಸಂಭ್ರಮ ಆಚರಿಸಿದರು. ಶ್ರೀಮತಿ ರೇಖಾ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜಯಲಕ್ಷ್ಮಿ ಅವರು ಧನ್ಯವಾದ ಸಮರ್ಪಣೆ ಮಾಡಿದರು.
ಆನಂತರ ಶ್ರೀಮತಿ ವಿನಯ ಅವರ ಮೊಮ್ಮಗನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಊಟೋಪಚಾರದ ವ್ಯವಸ್ಥೆ ಮಾಡಿದ್ದರು.
SEP 19, 2025 7.56 AM IST


