ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾವೂರು ವಿಭಾಗ ಸಹ ಪ್ರಮುಖರಾದ ಭರತ್ ರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿ ಸಮಾಜದಲ್ಲಿರುವ ಎಲ್ಲರನ್ನು ಪರಸ್ಪರ ಸಹೋದರತ್ವದಲ್ಲಿ ಕಾಣಬೇಕು. ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ನಾರಾಯಣ ಗುರುಗಳ ತತ್ವದಂತೆ ಎಲ್ಲರನ್ನೂ ಕೈ ಹಿಡಿದು ನಡೆಸಬೇಕು ಎಂದು ಹೇಳಿ ರಕ್ಷಾ ಬಂಧನದ ಸಂದೇಶ ನೀಡಿದರು.
ಸದಸ್ಯರು ಪರಸ್ಪರ ರಕ್ಷಾ ಬಂಧನ ಕಟ್ಟಿ, ಸಿಹಿ ತಿಂಡಿ ಹಂಚುವುದರ ಮೂಲಕ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಭರತ್ ರಾಜ್ ರನ್ನು ಘಟಕದ ವತಿಯಿಂದ ಗೌರವಿಸಲಾಯಿತು.
ಘಟಕದ ಅಧ್ಯಕ್ಷರಾದ ಅಶೋಕ್ ಅಂಚನ್ ಕೋಡಿಕಲ್, ಕಾರ್ಯದರ್ಶಿ ಯಶವಂತ್ ಪೂಜಾರಿ ಉಳಾಯಿಬೆಟ್ಟು, ಮಾಜಿ ಅಧ್ಯಕ್ಷರು ಹಾಗೂ ಹೆಚ್ಚಿನ ಸದಸ್ಯರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.


