ಅದೆಷ್ಟೋ ಬಲಿದಾನ, ನಿರಂತರ ಹೋರಾಟದ ಪ್ರತಿಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು, ಸ್ವಾತಂತ್ರ್ಯೋತ್ಸವ ಆಚರಣೆ ಯ ಸಂದರ್ಭದಲ್ಲಿ ಅಂಥ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮುಲ್ಕಿ ಬಿಲ್ಲವ ಸಂಘದ ಉಪಾಧ್ಯಕ್ಷೆ ಸೀತಾ ಗೋಪಾಲ್ ಹೇಳಿದರು.
ಘಟಕದ ಆಶ್ರಯದಲ್ಲಿ ಯೂನಿಯನ್ ಕ್ಲಬ್ ನಲ್ಲಿ ನಡೆದ 79 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷ ವಿನಯ್ ಕುಮಾರ್ ಮಟ್ಟು ವಹಿಸಿದ್ದರು.
ಸಮಾರಂಭದಲ್ಲಿ ನಿವೃತ್ತ ಯೋಧ ಹಾಗೂ ಘಟಕದ ಮಾಜಿ ಅಧ್ಯಕ್ಷ ಮಾಧವ್ ಪೂಜಾರಿ ಕಿಲ್ಪಾಡಿ, ಜೊತೆ ಕಾರ್ಯದರ್ಶಿ ಭವಿಶ್ ಸಾಲ್ಯಾನ್ ,ಕೋಶಾಧಿಕಾರಿ ಪ್ರಥ್ವಿಕ್ ಡಿ. ಕೋಟ್ಯಾನ್ ಉಪಸ್ಥಿತರಿದ್ದರು.
ವಿನಯ್ ಕುಮಾರ್ ಮಟ್ಟು ಸ್ವಾಗತಿಸಿದರು, ಭವಿಶ್ ಸಾಲ್ಯಾನ್ ವಂದಿಸಿದರು, ಸತೀಶ್ ಕಿಲ್ಪಾಡಿ ನಿರೂಪಿಸಿದರು.
ಈ ಕಾರ್ಯಕ್ರಮ ದ ನಂತರ ಬೋರ್ಡ್ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿನ ಮಕ್ಕಳಿಗೆ ಘಟಕದ ವತಿಯಿಂದ ಸಿಹಿ ತಿಂಡಿ ನೀಡಲಾಯ್ತು.


