ಯುವವಾಹಿನಿ (ರಿ ) ಕೊಲ್ಯ ಘಟಕದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಸಹಕಾರದಲ್ಲಿ ಸೌರ ಶಕ್ತಿ ಜೀವನೋಪಾಯ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ತಾ. 12-03-2025 ಕೊಲ್ಯ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಿತು. ಸೆಲ್ಕೋ ಸೋಲಾರ್ ಪ್ರೈವೆಟ್ ಲಿ. ಇದರ ಸಿಬ್ಬಂದಿ ಶ್ರೀ ವಿನೋದ್ ಸೌರಶಕ್ತಿ ಬಳಕೆ ಬಗ್ಗೆ, ಸೌರ ಶಕ್ತಿ ಜೀವನೋಪಾಯ ಯಂತ್ರಗಳ ಉಪಯೋಗ, ಸ್ವ ಉದ್ಯೋಗಕ್ಕೆ ಯಾವ ಸೌರ ಶಕ್ತಿ ಯಂತ್ರಗಳು ಉಪಯೋಗವಾಗುವುದು ಎಂಬುದರ ಬಗ್ಗೆ ವಿವರಿಸಿದರು. ಘಟಕದ ದ್ವಿತೀಯ ಉಪಾಧ್ಯಕ್ಷರಾದ ಶ್ರೀ ಜೀವನ್ ಕೊಲ್ಯ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಸರ್ವರನ್ನು ಸ್ವಾಗತಿಸಿದರು. ಘಟಕದ ಅಧ್ಯಕ್ಷರಾದ ಶ್ರೀಮತಿ ಸುಧಾ ಸುರೇಶ್ ರವರು ಸೌರ ಶಕ್ತಿ ಬಗ್ಗೆ ಸರ್ವರೂ ತಿಳಿದು, ಎಲ್ಲರೂ ಸೌರ ಶಕ್ತಿ ಬಳಕೆ ಬಗ್ಗೆ ಜಾಗೃತ ರಾಗಲು ಕರೆ ನೀಡಿದರು. ಘಟಕದ ಕಾರ್ಯದರ್ಶಿ ಶ್ರೀ ಜಗಜೀವನ್ ಕೊಲ್ಯ ಧನ್ಯವಾದಗೈದರು.
AUG 13, 2025 2.28 PM IST


