ತಾ.12-03-2025 ನೇ ಬುಧವಾರ, ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನ, ಕೊಲ್ಯದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಧಾ ಸುರೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರು ಸರ್ವರನ್ನೂ ಸ್ವಾಗತಿಸಿದರು
ಘಟಕದ ಮಹಿಳಾ ಸದಸ್ಯರಿಗಾಗಿ ದಿನಾಂಕ 08.03.2025 ಮತ್ತು 09.03.2025 ರಂದು ನಡೆದ ಆನ್ಲೈನ್ ಸ್ಫರ್ಧೆಯ ವೈಯಕ್ತಿಕ ಹಾಗೂ ತಂಡ ಸ್ಪರ್ಧೆಯ ಫಲಿತಾಂಶದ ಪ್ರಕಟನೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಲತೀಶ್ ಎಂ ಸಂಕೋಳಿಗೆ ನಡೆಸಿಕೊಟ್ಟರು. ಮುಖ್ಯ ಅತಿಥಿಯಾಗಿ ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ) ಕೊಲ್ಯ ಇದರ ಟ್ರಸ್ಟಿ ಶ್ರೀ ಪುರುಷೋತ್ತಮ್ ಅಡ್ಕ ವಿಜೇತರಿಗೆ ಬಹುಮಾನ ವಿತರಿಸಿದರು. ಸದಸ್ಯರಾದ ಕು| ಶಮ ಕೊಲ್ಯ ಧನ್ಯವಾದ ಸಲ್ಲಿಸಿದರು.


