ಯುವವಾಹಿನಿ (ರಿ) ಮಂಗಳೂರು ಘಟಕ ಮತ್ತು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಯ ಜಂಟಿ ಆಶ್ರಯದಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಕರ್ನಾಟಕ ಮಂಗಳೂರು ಇದರ ಸದಸ್ಯರಿಗೆ ಯುವವಾಹಿನಿಯ ಕಾರ್ಯವೈಖಾರಿ, ಸಮಾಜ ಸೇವೆ, ವಿವಿಧ ಕಾರ್ಯಕ್ರಮಗಳ ಬಗ್ಗೆ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಪರಮೇಶ್ವರ ಪೂಜಾರಿ ಸವಿಸ್ತಾರವಾಗಿ ತಿಳಿಸಿದರು.
ಈ ಸಂದರ್ಭ ಮಂಗಳೂರು ಘಟಕದ ಅಧ್ಯಕ್ಷರಾದ ಅಶೋಕ್ ಅಂಚನ್ ಕೋಡಿಕಲ್ ಕಾರ್ಯದರ್ಶಿ ಯಶವಂತ್ ಪೂಜಾರಿ ಉಳಾಯಿಬೆಟ್ಟು ಹಾಗೂ ಘಟಕದ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.


