
ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕ:-
ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಮತ್ತು ವಿದ್ಯಾರ್ಥಿ ವೇತನ ಮಾಹಿತಿ ಬಗ್ಗೆ ‘ ಅರಿವಿನ ಬೆಳಕು ‘ ಕಾರ್ಯಕ್ರಮವು 02-02-2025 ರಂದು ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಕುಳಾಯಿಯಲ್ಲಿ ಜರಗಿತು* .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಧನೀಷ್ ಕುಳಾಯಿ ವಹಿಸಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಮಾಜಿ ಅಧ್ಯಕ್ಷರಾದ ಶ್ರೀ ಗೋಪಾಲ ಬಂಗೇರ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ತರಬೇತುದಾರ ಶ್ರೀ ರಾಜೇಂದ್ರ ಭಟ್ ಉಡುಪಿ ಹಾಗೂ ಶ್ರೀ ಕೆ. ನಾರಾಯಣ ನಾಯಕ್, ನಿವೃತ್ತ ಶಾಲಾ ತಪಾಸಣಾಧಿಕಾರಿ ತರಬೇತುದಾರರಾಗಿ ಆಗಮಿಸಿ, ಮಕ್ಕಳಲ್ಲಿ ತನ್ನ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕರಿಸಿದರು. ಕುಳಾಯಿ ಬೈಕಂಪಾಡಿ, ಸುರತ್ಕಲ್ ಪರಿಸರದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಕಾರ್ಯಕ್ರಮದ ವಿಶೇಷ ಅತಿಥಿ ಅಭ್ಯಾಗತರನ್ನು ಸ್ಥಾಪಕಾಧ್ಯಕ್ಷರಾದ ಶ್ರೀ ವಿಶ್ವನಾಥ್ ಕೆ ಸ್ವಾಗತಿಸಿದರು.ಕಾರ್ಯದರ್ಶಿ ಮನೋಜ್ ಕುಮಾರ್ ರವರ ಸಹಕಾರ ದೊಂದಿಗೆ, ಶ್ರೀಮತಿ ಯಶಸ್ವಿನಿ ಸಂಯೋಜಿಸಿದರು. ಶ್ರೀಮತಿ ರೇಖಾ ಅಂಚನ್ ಹಾಗೂ ಶ್ರೀ ಸುರೇಶ್ ಪೂಜಾರಿ ನಿರೂಪಿಸಿದರು. ಸಂಚಾಲಕರಾದ ಕು ಯಕ್ಷಿತ ವಂದಿಸಿದರು.


