
ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ವತಿಯಿಂದ “ಗುರು ಸ್ಮರಣೆ” ಸಂಕೀರ್ತನಾ ಕಾರ್ಯಕ್ರಮ, ಮಾಸಿಕ ಸಭೆ
ದಿನಾಂಕ 31.01.2025ರ ಶುಕ್ರವಾರ ಶತಭಿಷಾ ನಕ್ಷತ್ರ ದಿನ ಸಂಜೆ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಘಟಕದ ವತಿಯಿಂದ “ಗುರು ಸ್ಮರಣೆ” ಸಂಕೀರ್ತನಾ ಕಾರ್ಯಕ್ರಮ ನಡೆಯಿತು.
ಪ್ರಸಾದ ವಿತರಣೆ ಬಳಿಕ ಸಂಜೆ ಘಟಕದ ಮಾಸಿಕ ಸಭೆಯು ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಪುತ್ತೂರು ಬ್ರಹ್ಮಶ್ರೀ ನಾಾಯಣಗುರು ಸಭಾಭವನದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯವರಾದ ಡಾ. ರಾಜಾರಾಮ್ ಕೆ ಬಿ ಯವರು ಸಭೆಯಲ್ಲಿ ಭಾಗವಹಿಸಿದ್ದರು.
ಗೆಜ್ಜೆ ಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಘಟಕದ ಗೌರವ ಸಲಹೆಗಾರರಾದ ಶ್ರೀ ವರದರಾಜ್ ಎಂ ರವರು ಬಿಡುಗಡೆ ಗೊಳಿಸಿದರು. ಡಾ., ರಾಜಾರಾಮ್ ಕೆ ಬಿ ಯವರು ಸೇರಿರುವ ಎಲ್ಲರನ್ನೂ ವಾರ್ಷಿಕ ಜಾತ್ರಾಮಹೋತ್ಸವಕ್ಕೆ ಆಮಂತ್ರಿಸಿದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಘಟಕದ ವತಿಯಿಂದ ಸಹಕಾರ ನೀಡುವುದಾಗಿ ಮತ್ತು 2025ನೇ ಏಪ್ರಿಲ್ ತಿಂಗಳಲ್ಲಿ ಒಂದು ದಿನದ ಪ್ರವಾಸ ಏರ್ಪಡಿಸುವುದಾಗಿ ಒಮ್ಮತದಿಂದ ತೀರ್ಮಾನಿಸಲಾಯಿತು.
ಘಟಕದ ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಅವರು ಮಾತನಾಡಿ ಸದಸ್ಯತ್ವ ನೋಂದಾವಣೆಗೆ ಎಲ್ಲರ ಸಹಕಾರ ಕೇಳಿದರು. ಮುಂದಿನ ದಿನಗಳಲ್ಲಿ ಘಟಕದ ಮೂಲಕ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಕೇಳಿ ಕೊಂಡರು*
ಕಾರ್ಯದರ್ಶಿ ಸುರೇಶ್ ವಿ ಅವರು ಸೇರಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.


