
ಹೆಜಮಾಡಿ ಯುವ ವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ಸುಮಾರು 26ನೇ ವರ್ಷಗಳಿಂದ ನಿರಂತರವಾಗಿ ಜರುಗುತ್ತಿದ್ದ ಸಾರ್ವಜನಿಕ ಶನಿ ಪೂಜೆಯು ಈ ಬಾರಿ ಗುರು ಮಂದಿರದ ಪ್ರಧಾನ ಆರ್ಚಕ ಹರೀಶ್ ಶಾಂತಿ ಹೆಜಮಾಡಿ ಮುಂಬೈ ಇವರ ಧಾರ್ಮಿಕ ಮುಂದಾಳತ್ವದಲ್ಲಿ ಮೇ ತಿಂಗಳ 3ನೇ ತಾರೀಕಿನಂದು ಜರಗಿತು. ಹೆಜಮಾಡಿ ಬಿಲ್ಲವರ ಸಂಘದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಜರಗಿದ ಕಾರ್ಯಕ್ರಮವನ್ನು ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್ ದಾಸ್ ಹೆಜಮಾಡಿ, ಯುವ ವಾಹಿನಿ ಘಟಕದ ಅಧ್ಯಕ್ಷರಾದ ಶ್ರೀ ದೀಪ ದಿನೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅನ್ನದಾನ ಸೇವೆಯನ್ನು ಶ್ರೀ ಲೋಕೇಶ್ ಅಮೀನ್ ಮತ್ತು ಪುಷ್ಪಾಲಂಕರ ಸೇವೆಯನ್ನು ಪಿ.ಕೆ. ಅಮೃತ್ ಕುಮಾರ್ ಮಂಗಳೂರು ಇವರ ವತಿಯಿಂದ ಜರಗಿತು. ಭಾಸ್ಕರ್ ಕೆ ಪಡುಬಿದ್ರಿ ಮತ್ತು ಬಳಗದವರ ನುರಿತ ಕಲಾವಿದರಿಂದ ತಾಳಮದ್ದಲೆ ರೂಪದಲ್ಲಿ ಶನಿ ಪೂಜೆ ಕಥಾ ಸೇವೆ ಜರಗಿತು. ದಾನಿಗಳ ಸಹಕಾರದಿಂದ 27ನೇ ವರ್ಷದ ಶನಿ ಪೂಜೆಯು ಬಹು ವಿಜೃಂಭಣೆಯಿಂದ ಜರುಗಿತು.


