60 ಯಾತ್ರಾರ್ಥಿಗಳ ತಂಡ ದಿನಾಂಕ 11.05.2025ನೇ ಆದಿತ್ಯವಾರ ಸಂಜೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಪ್ರಯಾಣ ಆರಂಭಿಸಿ ಮರುದಿವಸ ಶಾರದಾಪೀಠ ವೈದಿಕ ಮಠ, ಯಜ್ಞ ಮಂಟಪ ಸಂದರ್ಶಸಿ, ಶಿವಗಿರಿ ಮಠ, ಗುರುಗಳ ಸಮಾಧಿ ಸ್ಥಳದಲ್ಲಿ ಗುರು ಪೂಜೆಯೊಂದಿಗೆ ಮುಂದುವರೆದು..ನಂತರ ಗುರುಗಳ ಜನ್ಮಸ್ಥಳ ಚೆಂಬಳಂತಿ , ಕುನ್ನುಪಾರಂ ಸುಬ್ರಹ್ಮಣ್ಯ ದೇವಸ್ಥಾನ , ಕನ್ಯಾಕುಮಾರಿಯಲ್ಲಿ ಬೋಟಿಂಗ್ ಮೂಲಕ ವಿವೇಕಾನಂದ ರಾಕ್ ವೀಕ್ಷಣೆ ,ಕನ್ಯಾಕುಮಾರಿ ದೇವಿಯ ಮೂಗುತಿ ದರ್ಶನ ಹಾಗೂ ಕನ್ಯಾಕುಮಾರಿ ದೇವಿಯ ದರ್ಶನ, ಗುರುಗಳು ತಪಸ್ಸು ಮಾಡಿದ ಮರುತ್ವಮಲೆ ಬೆಟ್ಟ,ಗುರುಗಳು ಸ್ಥಾಪಿಸಿದ ಪ್ರಥಮ ದೇವಸ್ಥಾನ ಅರವಿಪುರದ ಶಿವನ ದರ್ಶನ, ನಾರಾಯಣ ಗುರುಗಳ ಪ್ರಥಮ ಮಂದಿರದ ವೀಕ್ಷಣೆ ಹಾಗೂ ಗುರುಗಳು ಇದ್ದ ರೀತಿಯ ಅವರ ಭಾವಚಿತ್ರ ವೀಕ್ಷಣೆ ಮಾಡುವುದರೊಂದಿಗೆ ಯಾತ್ರೆಯನ್ನು ಸ್ಮರಣೀಯಗೊಳಿಸಲಾಯಿತು



