22-01-2017, 9:18 AM
ದಿನಾಂಕ 22-1-2017 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ(ನಿ) ಮಂಗಳೂರು, ದಿ ಕ್ರಿಶ್ಚಿಯನ್ ಎಜ್ಯುಕೇಶನ್ ಸೊಸೈಟಿ (ರಿ) ಮಂಗಳೂರು, ರೋಟರಿ ಕ್ಲಬ್ ಮಂಗಳೂರು, ಯುವವಾಹಿನಿ (ರಿ) ಮಂಗಳೂರು ಘಟಕ ಮತ್ತು I.A.S. ಮಂಗಳೂರು ಸಂಸ್ಥೆಗಳ ಸಹಯೋಗದೊಂದಿಗೆ UPSC/KAS/IBPS ಉಚಿತ ಪ್ರೇರಣಾ ಶಿಬಿರವು ಜರಗಿತು. ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಎಸ್‌ಪಿ ಭೂಷಣ್ ಗುಲಾಬ್ ರಾವ್ ಬೋರಸೆ IPS ಉದ್ಘಾಟಿಸಿ, ಮಾತನಾಡುತ್ತಾ ಸೇವಾ ಮನೋಭಾವ ಇರುವವರು ಕಠಿಣ ಅಭ್ಯಾಸ, ತರಬೇತು ಪಡೆದು ಜನ ಸೇವೆ ಮಾಡುವ ಮನೋಭಾವವಿದ್ದರೆ ಮಾತ್ರ ಐ.ಎ.ಎಸ್, ಕೆ.ಎ.ಎಸ್‌ನಂತಹ […]
Read More
15-12-2016, 11:26 AM
ಮಂಗಳೂರು ಘಟಕದ ವತಿಯಿಂದ ದತ್ತು ಸ್ವೀಕಾರ ಮಾಡಿರುವ ವಿದ್ಯಾರ್ಥಿಗಳಿಗೆ ಈ ಸಾಲಿನ ಸಂಪೂರ್ಣ ಶೈಕ್ಷಣಿಕ ವೆಚ್ಚದ ಸಹಾಯಧನ ವಿತರಣೆ.
Read More
20-11-2016, 6:02 AM
ಯುವವಾಹಿನಿಯ ವರ್ಷದ ಪ್ರತಿಷ್ಠಿತ ಕಾರ್ಯಕ್ರಮ ಯುವವಾಹಿನಿ ಅಂತರ ಘಟಕ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ 20 ನವಂಬರ್ 2016 ನೇ ಆದಿತ್ಯವಾರ ಜರಗಿತು. ಯುವವಾಹಿನಿ ಮಂಗಳೂರು ಘಟಕದ ಆಶ್ರಯದಲ್ಲಿ ಜರಗಿದ ಸಾಂಸ್ಕೃತಿಕ ಕಲಾ ರೂಪಕ ಸರ್ವರ ಪ್ರಶಂಸೆಗೆ ಪಾತ್ರವಾಯಿತು.
Read More
27-08-2016, 5:22 AM
ಮಂಗಳೂರು ಘಟಕದ ವತಿಯಿಂದ ದಿನಾಂಕ 27-08-2016 ರಂದು ಗೋಕರ್ಣನಾಥ ಕಾಲೇಜ್‌ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿ ಯರಿಗೆ ನಾಯಕತ್ವ ತರಬೇತಿ ಶಿಬಿರ ನಡೆಯಿತು. 27 ಈ ತರಬೇತಿ ಶಿಬಿರದಲ್ಲಿ ಸುಮಾರು 10 ಕಾಲೇಜುಗಳಿಂದ 48 ವಿದ್ಯಾರ್ಥಿಗಳು ಭಾಗವಹಿಸಿರುವರು. ಶಿಬಿರದ ಉದ್ಘಾಟನೆಯನ್ನು ಬಿ.ಜಿ.ಎಸ್. ಕಾಲೇಜಿನ ಪ್ರಾಧ್ಯಾಪಕ ಕೇಶವ ಕಟೀಲು ನೆರವೇರಿಸಿದರು. ಅಡ್ಯಾರು ಸಹ್ಯಾದ್ರಿ ಎಂ.ಬಿ.ಎ. ಕಾಲೇಜಿನ ಪ್ರಾಧ್ಯಾಪಕ ಪದ್ಮನಾಭರವರು ತರಬೇತಿಯನ್ನು ನಡೆಸಿಕೊಟ್ಟರು. ವಕೀಲರಾದ ನವನೀತ್ ಡಿ. ಹಿಂಗಾಣಿಯವರು ಬಿಲ್ಲವ ಸಂಘಟನೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನಂತರ ನರೇಶ್ ಸಸಿಹಿತ್ಲು ಯುವವಾಹಿನಿ […]
Read More
31-07-2016, 6:03 AM
ಪ್ರವಾಸಾನುಭವ ’ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ತತ್ವವನ್ನಿರಿಸಿಕೊಂಡು ಹಲವು ಚಿಕ್ಕ-ದೊಡ್ಡ ಪ್ರವಾಸಗಳನ್ನು ಏರ್ಪಡಿಸುತ್ತ ಬಂದಿರುವ ಯುವವಾಹಿನಿ ಮಂಗಳೂರು ಘಟಕವು ಈ ಬಾರಿ ದಕ್ಷಿಣ ಭಾರತ ಪ್ರವಾಸವನ್ನು ಏರ್ಪಡಿಸಿತ್ತು. 2014 ರಲ್ಲಿ ಉತ್ತರ ಭಾರತ ಮತ್ತು ನೇಪಾಳದ 10 ದಿನಗಳ ಪ್ರವಾಸದಲ್ಲಿ ಭಾಗಿಯಾಗಿದ್ದ ನಾನು 2015 ರ ಉತ್ತರ ಭಾರತ ಪ್ರವಾಸ (ವಾರಣಾಸಿ, ಹೃಷಿಕೇಶ, ಹರಿದ್ವಾರ, ವೈಷ್ಣೋದೇವಿ, ದೆಹಲಿ, ಅಮೃತಸರ್, ವಾಘಾ ಬೋರ್ಡರ್ ಇತ್ಯಾದಿ ಸ್ಥಳಗಳಿಗೆ)ಕ್ಕೆ ಹೋಗಲಾಗಲಿಲ್ಲ. ಈ ಬಾರಿ ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳದ ಆಯ್ದ […]
Read More