05-09-2019, 5:32 PM
ಯುವವಾಹಿನಿ ರಿ. ಮೂಡಬಿದಿರೆ ಘಟಕದ ವತಿಯಿಂದ ಆರಂಭಿಸಲಾದ *ಯುವ ಸ್ಪಂದನ ಸೇವಾ ಯೋಜನೆಯ 16ನೇ ಸೇವೆಯನ್ನು ಶ್ರೀಮತಿ ಲಲಿತಾ ಹಾಗೂ ಓಬಯ್ಯ ಪೂಜಾರಿ ದಂಪತಿಗಳ ಬಡಕುಟುಂಬವೊಂದು ತನ್ನ 4 ಮಕ್ಕಳೊಂದಿಗೆ ಬೆಳ್ತಂಗಡಿ ತಾಲೂಕಿನ ಪೆರಿಂಜೆಯಲ್ಲಿ ವಾಸವಾಗಿದ್ದು ಹಿಂದಿನಿಂದಲೂ ಕೂಲಿ ಕೆಲಸ ಹಾಗೂ ಬೀಡಿ ಕಟ್ಟುತ್ತಾ ತುಂಬಾ ಕಷ್ಟಕರ ಜೀವನವನ್ನು ನಡೆಸುತ್ತಾ ತನ್ನ ಮಕ್ಕಳಿಗೆ ತಮಗೇ ಸಾಧ್ಯವಿದ್ದಷ್ಟು ವಿದ್ಯಾಭ್ಯಾಸ ಕೊಟ್ಟು ಹಿರಿಮಗಳಿಗೆ ಸಾಲ ಸೋಲ ಮಾಡಿ ಮದುವೆ ಮಾಡಿ ವರ್ಷ ಒಂದು ಆಗುವಷ್ಟರಲ್ಲಿ ಸಾಕಿ ಸಲಹಿದ ಕುಟುಂಬದ ಯಜಮಾನ […]
Read More
05-09-2019, 5:29 PM
ಯುವವಾಹಿನಿ (ರಿ ) ಮೂಲ್ಕಿ ಘಟಕ ಹಾಗೂ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆ ಮೂಲ್ಕಿ ಇವರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ-5.9. 2019 ರಂದು ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಜರಗಿತು. ಯುವ ವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಸತೀಶ್ ಕಿಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಯುವ ವಾಹಿನಿ (ರಿ )ಕೇಂದ್ರ ಸಮಿತಿ ಮಂಗಳೂರು ಉಪಾಧ್ಯಕ್ಷರಾದ ಡಾ / ರಾಜಾರಾಮ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಹೂ ಹಾಕಿ ನಮಿಸಲಾಯ್ತು. […]
Read More
05-09-2019, 5:26 PM
ನಗರದ ಉಜ್ಜೋಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವವಾಹಿನಿ ಕಂಕನಾಡಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರನ್ನು ಗುರುತಿಸಿ ಗೌರವಿಸುವ *ಗುರುನಮನ* ಕಾರ್ಯಕ್ರಮ ಇತ್ತೀಚೆಗೆ ಉಜ್ಜೋಡಿ ಶ್ರೀ ಮಹಾಂಕಾಳಿ ದೈವಸ್ಥಾನದ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಶಾರದ ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಕಟೀಲ್ ಭಾಗವಹಿಸಿ ಶಿಕ್ಷಕರನ್ನು ಗುರುತಿಸಿ ಗೌರವಿಸು ಅತ್ಯಂತ ಮಹತ್ತರ ಸೇವೆ ಎಂದು ಯುವವಾಹಿನಿ ಕಂಕನಾಡಿ ಘಟಕದ ವಿವಿಧ ಚಟುವಟಿಕೆಗಳ ಬಗ್ಗೆ ಶ್ಲಾಘಿಸುತ್ತಾ ಶಿಕ್ಷಕರ ದಿನಾಚರಣೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರಾದ ಸೈಂಟ್ ಅಲೋಶಿಯಸ್ ಕಾಲೇಜಿನ ರಾಕೇಶ್ […]
Read More
05-09-2019, 5:19 PM
ಯುವವಾಹಿನಿ (ರಿ) ಕೊಲ್ಯ ಘಟಕ ಇದರ ಸಾಪ್ತಾಹಿಕ ಸಭೆ ಹಾಗೂ ಗುರುವಂದನಾ ಕಾರ್ಯಕ್ರಮ ದಿನಾಂಕ 5.9.19 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕೊಲ್ಯದಲ್ಲಿ ಜರುಗಿತು. ಪ್ರಾರ್ಥನೆಯೊಂದಿಗೆ ಸಭೆಯು ಘಟಕದ ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಲಾಯಿತು ಅಧ್ಯಕ್ಷರು ಸಭೆಗೆ ಬಂದ ಅತಿಥಿಗಳನ್ನು ಮತ್ತು ಸದಸ್ಯರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು ಕಾರ್ಯದರ್ಶಿ ಆನಂದ್ ಅಮೀನ್ ಗತ ಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು ಸದಸ್ಯರು ಚಪ್ಪಾಳೆ ಮೂಲಕ ಅನುಮೋದನೆ ನೀಡಿದರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ 165 ನೇ […]
Read More
04-09-2019, 5:34 PM
ಯುವವಾಹಿನಿ ಕೂಳೂರು ಘಟಕದ ಸೇವಾ ನಿಧಿ ಯೋಜನೆಯ 2ನೇ ಸಹಾಯ ಹಸ್ತ ಅಶೋಕ್ ಪೂಜಾರಿ ಗಂಜಿಮಠ ಇವರು ಕೆಲಸ ಮಾಡುವ ಸಂದರ್ಭದಲ್ಲಿ ದೊಡ್ಡ ರೀಲ್ ಇರ ಕಾಲಿನ ಮೇಲೆ ಬಿದ್ದು ತೀವ್ರ ಗಾಯಗೊಂಡು ಕೊನೆಗೆ ಅವರ ಒಂದು ಕಾಲನ್ನೇ ಕತ್ತರಿಸಿ ತೆಗೆಯಲಾಗಿದೆ. ಇವರ ಕುಟುಂಬಕ್ಕೆ ಇವರೇ ಆಧಾರಸ್ತಂಭ ಆಗಿದ್ದರು. ಈಗ ಇವರಿಗೆ ಹೀಗಾಗಿದ್ದು ಇವರ ಕುಟುಂಬಕ್ಕೆ ದಿಕ್ಕೇ ತೋಚದಾಗಿದೆ. ಇವರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ರೂ. 10,000 ದ ಚೆಕ್ ನ್ನು ದಿನಾಂಕ 04.09.19 ರ ಸಂಜೆ […]
Read More
03-09-2019, 3:00 AM
ಯುವವಾಹಿನಿ (ರಿ) ಮಂಗಳೂರು ಘಟಕದಿಂದ ಮಂದಾರ – ಪಚ್ಚನಾಡಿ ನಿವಾಸಿಗಳ ಕಾಲೋನಿಗೆ ಭೇಟಿ. ದಿನಾಂಕ 01.09.2019 ರಂದು ಬೆಳಿಗ್ಗೆ ನಮ್ಮ ಘಟಕವು ಬೈತುರ್ಲಿ KHB ಕಾಲೋನಿ ಯಲ್ಲಿರುವ ಮಂದಾರ – ಪಚ್ಚನಾಡಿ ಡಂಪಿಂಗ್ ಯಾರ್ಡ್ ನ ನಿವಾಸಿಗಳನ್ನು ಭೇಟಿ ಮಾಡಿ ನಿವಾಸಿಗಳ ನೋವಿಗೆ ಸ್ಪಂದಿಸಿತು. ಘಟಕದ ಅಧ್ಯಕ್ಷರಾದ ಶ್ರೀ ಕೆ. ಆರ್. ಲಕ್ಷ್ಮೀ ನಾರಾಯಣ ರವರು ಬೆಳಿಗ್ಗೆ 5.30ರಿಂದ ಧ್ಯಾನ ಮತ್ತು ಯೋಗದ ಅಭ್ಯಾಸಗಳನ್ನು ನಿರಂತರವಾಗಿ ಮಾಡಿಸಿ ಅವರ ಮನಸ್ಥೈರ್ಯವನ್ನು ಹೆಚ್ಚಿಸಿದರು. ಆಯುರ್ವೇದ ವೈದ್ಯರಾದ ಡಾ. ಜ್ಞಾನೇಶ್ವರ […]
Read More
03-09-2019, 2:48 AM
ಯುವವಾಹಿನಿ (ರಿ) ಹೆಜಮಾಡಿ ಘಟಕ . ಬ್ರಹ್ಮ್ಮಶ್ರೀ ನಾರಾಯಣ ಗುರುವರ್ಯರ 165 ನೇ ಗುರು ಜಯಂತಿಯ ಅಂಗವಾಗಿ ಹೆಜಮಾಡಿ ಬಿಲ್ಲವರ ಹತ್ತು ಸಮಸ್ತರಿಗೆ ವಿವಿಧ ಕ್ರೀಡಾಕೂಟಗಳು ದಿನಾಂಕ 25/08/2019 ರಂದು ಹೆಜಮಾಡಿ ಬಿಲ್ಲವ ಸಂಘದ ವಠಾರದಲ್ಲಿ ಜರಗಿತು . ಈ ಪಂದ್ಯಾಟದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಹರೀಶ್ ವಹಿಸಿದ್ದರು . ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಹರೀಶ್ ಸರ್ವರನ್ನು ಸ್ವಾಗತಿಸಿದರು . ಹೆಜಮಾಡಿ ಬಿಲ್ಲವರ ಸಂಘ ದ ಉಪಾಧ್ಯಕ್ಷರು, ಹೆಜಮಾಡಿ ಮಹಾಲಿಂಗೇಶ್ವರ […]
Read More
03-09-2019, 2:42 AM
ಯುವವಾಹಿನಿ(ರಿ.) ಕೂಳೂರು ಘಟಕದ ವತಿಯಿಂದ ಅಂಗನವಾಡಿ ಕೇಂದ್ರ ಮಂಜನಗುಡ್ಡೆ ಇಲ್ಲಿನ ಕಾರ್ಯಕರ್ತೆಯ ಮನವಿಯ ಮೇರೆಗೆ ಅಂಗನವಾಡಿಯ ಅಡುಗೆ ಕೋಣೆ ರಿಪೇರಿ ಕೆಲಸ ಮಾಡಿಕೊಡಲಾಯಿತು. ಇದರ ಹಸ್ತಾಂತರವನ್ನು ದಿನಾಂಕ 30.08.2019 ರಂದು ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಮಾಡಲಾಯಿತು. ಈ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಮಾತನಾಡಿ ಅತಿ ಶೀಘ್ರದಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಕೆಲಸ ಮಾಡಿಕೊಟ್ಟ ಯುವವಾಹಿನಿ(ರಿ.) ಕೂಳೂರು ಘಟಕಕ್ಕೆ ತಮ್ಮ ಧನ್ಯವಾದ ಸಲ್ಲಿಸಿದರು. ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್, ಗೌರವ ಸಲಹೆಗಾರರಾದ ನೇಮಿರಾಜ್, ಉಪಾಧ್ಯಕ್ಷರಾದ […]
Read More
28-08-2019, 5:14 PM
ಯುವವಾಹಿನಿ (ರಿ) ಕಟಪಾಡಿ ಘಟಕದ ಪದಗ್ರಹಣ ಸಮಾರಂಭವು ಆಗಸ್ಟ್ 28 ರಂದು ಶ್ರೀ ವಿಶ್ವನಾಥ ಕ್ಷೇತ್ರದ ಗುರುಪ್ರಸಾದ್ ಸಭಾಂಗಣದಲ್ಲಿ ಜರಗಿತು.ಉದ್ಯಮಿ ಕಾಪು ಪ್ರಭಾಕರ್ ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಪದ ಪ್ರಧಾನ ವನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ನರೇಶ್ ಸಶಿಹಿತ್ಳು ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ನಮ್ಮ ಘಟಕದ ಸಲಹೆಗರರಾದ ರವಿರಾಜ್ ಮತ್ತು ಉಡುಪಿ ವಲಯ ಸಂಘಟಕರಾದ ರಮೇಶ್ ಕೋಟಿಯಾನ್ ಹಾಗೂ ಕ್ಷೇತ್ರದ ಅಧ್ಯಕ್ಷರಾದ ಬಿ ಎನ್ ಶಂಕರ್ ಪೂಜಾರಿ ಉಪಸ್ಥಿತರಿದ್ದರು. 2018-19 ರ ಅಧ್ಯಕ್ಷರಾದ […]
Read More
27-08-2019, 1:17 PM
ಯುವವಾಹಿನಿ(ರಿ.) ಅಡ್ವೆ ಘಟಕದ ಆತಿಥ್ಯದಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆಯ ಅಂಗವಾಗಿ ದಿನಾಂಕ 24-08-2019 ಶನಿವಾರದಂದು ಪುಟಾಣಿಗಳಿಗೆ ಮುದ್ದುಕೃಷ್ಣ ಸ್ಪರ್ಧೆ, ಬಾಲಕೃಷ್ಣ ಸ್ಪರ್ಧೆ ಹಾಗೂ ಶಾಲಾ ಮಕ್ಕಳಿಗೆ ಭಜನೆ ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
Read More